|| ಗಣಪತಿ ಸ್ತುತಿ ||
ಓಂಕಾರ ನಾದಪ್ರಿಯ ಹೇ ಗಣಪಾ||2||
ಸಾಕಾರ ವಂದನೆ ಹೇ ಗಣಪಾ||ಓಂಕಾರ||
ಧಿಮಿಧಿಮಿಧಿಮಿಧಿಮಿ ನಾಟ್ಯ ಸ್ವರೂಪ
ನಿನಗಿದೋ ಅರ್ಪಣೆ ಭಕ್ತಿಯ ಧೂಪ
ಹೇ ಪ್ರಭೋ ನಿನಗಿದೋ ನಮ್ಮ ನಮಸ್ಕಾರ||2||
||ಓಂಕಾರ||
ನಗುಮೊಗದಿಂದ ಜಗವನು ನೋಡುತ
ಮಂದಹಾಸದಲಿ ಕುಳಿತಿಹ ದೇವಾ
ಅಭಯಹಸ್ತವ ನೀಡಿ ಚೈತನ್ಯ ನೀಡುವ
ಭವ್ಯ ಮೂರುತಿ ಹೇ ಗಣನಾಥ
ಧಿಮಿಧಿಮಿಧಿಮಿಧಿಮಿ ನಾಟ್ಯ ಸ್ವರೂಪ
ನಿನಗಿದೋ ಅರ್ಪಣೆ ಭಕ್ತಿಯ ಧೂಪ
ಹೇ ಪ್ರಭೋ ನಿನಗಿದೋ ನಮ್ಮ ನಮಸ್ಕಾರ||2||
||ಓಂಕಾರ||
ಸಡಗರದಿಂದ ತೋರಣ ಕಟ್ಟಿ
ಭಕ್ತಿಭಾವದಿ ದೀಪವ ಹಚ್ಚಿ
ಪಂಚಕಜ್ಜಾಯದ ನೈವೇದ್ಯವಿತ್ತು
ಕರ್ಪೂರದಾರತಿ ನಿತ್ಯವು ಬೆಳಗೀ||ಸಡಗರ||
ಜಯಜಯ ಎನ್ನೋನ ಗಣಪಗೆ
ಪೂಜೆಯ ಮಾಡೋಣ||ಜಯ||
ಶರಣು ಶರಣು ಗಣಪಾ ಶರಣು ಶರಣು ಬೆನಕಾ||ಶರಣು||
||ಓಂಕಾರ||
0 ಕಾಮೆಂಟ್‌ಗಳು