|| ಶ್ರೀಹರಿ ಸ್ತುತಿ ||
ನರನಾದ ಮೇಲೆ ಹರಿನಾಮ ಜಿಹ್ನೆಯೊಳಿರಬೇಕು||ಪ||
ಭೂತದಯಾಪರನಾಗಿರಬೇಕು
ಪಾತಕವೆಲ್ಲ ಕಳೆಯಲಿಬೇಕು
ಮಾತು ಮಾತಿಗೆ ಹರಿಯೆನ್ನಬೇಕು ||೧||
ಆರುವರ್ಗವನಳಿಯಲಿಬೇಕು
ಮೂರು ಗುಣಂಗಳ ಮೀರಲಿಬೇಕು
ಸೇರಿ ಬ್ರಹ್ಮನೊಳಿರಬೇಕು ||೨||
ಅಷ್ಟಮದಂಗಳ ತುಳಿಯಲಿಬೇಕು
ದುಷ್ಟರ ಸಂಗವ ಬಿಡಬೇಕು
ಕೃಷ್ಣ ಕೇಶವ ಎನ್ನಬೇಕು ||೩||
ಬಂದದ್ದುಂಡು ಸುಖಿಸಲಿಬೇಕು
ನಿಂದಾಸ್ತುತಿಗಳ ತಾಳಲಿಬೇಕು
ತಂದೆ ಪುರಂದರವಿಠಲ ಎನಬೇಕು ||೪||
0 ಕಾಮೆಂಟ್‌ಗಳು