ನಂಬಿದೆ ವರಲಕ್ಷ್ಮಿಯೇ ತವಚರಣಕೆ - Nambide Varalakshmiye Tava Charanke

|| ಶ್ರೀ ವರಲಕ್ಷ್ಮಿ ಸ್ತುತಿ ||


ನಂಬಿದೆ ವರಲಕ್ಷ್ಮಿಯೇ ತವಚರಣಕೆ । 

ವಂದಿಪೆ ಶ್ರೀ ಲಕ್ಷ್ಮಿಯೇ ||ಪ||


ನಂಬಿ ನಿನ್ನಯ ಚರಣ ಪೂಜಿಸಿ 

ಅಂಬುಜಾಕ್ಷಿಯೆ ಮುದದಿ ಸ್ಮರಿಸುವೆ 

ಕಂಬನಿಯ ಕಳೆಯುತ್ತ ಅನುದಿನ 

ಸಂಭ್ರಮವ ನೀಡೆನ್ನ ಬಾಳಲಿ ||ಅ.ಪ||


ಇಷ್ಟದಿಂದಲಿ ಪೂಜಿಸೆ |

ಸರ್ವರ ಮನದ| ಭೀಷ್ಟವ ಸಲ್ಲಿಸುವೆ|

ಕಷ್ಟ ನಷ್ಟವ ದೂರ ಮಾಡುತ 

ಅಷ್ಟ ಸೌಭಾಗ್ಯ ವನು ನೀಡುವ 

ವಿಷ್ಣುಪ್ರಿಯೆ ಸುಮ ಅರ್ಪಿಸುವೆನು 

ಕೃಷ್ಣವೇಣಿಯೆ ನಿನ್ನ ಚರಣವ ||೧||


ಸೆರಗೊಡ್ಡಿ ಬೇಡುವೆನು|

ಸಿರಿದೇವಿಯೆ ಶಿರದ ಪ್ರಸಾದವನು 

ಭಕ್ತರೆಲ್ಲರೂ ಸೇರಿ ಮುದದೊಳು 

ಭಕ್ತಿಯಿಂದಲಿ ನಿನ್ನ ಬೇಡಲು 

ಭಾಗ್ಯವಂತರ ಮಾಡಿ ತರಳರ 

ಬಾಧೆಯನು ಪರಿಹರಿಸು ಜನನಿ ॥೨||


ಮಂದಾರ ಕುಸುಮವನು |

ಕಂದಳಿಗಿಂದು ಚಂದದಿ ಕರುಣಿಸಮ್ಮ 

ಎಂದೂ ಕುಂದದ ಕುಂಕುಮರಿಶಿನ 

ಕಂಕಣವು ಕರಿಮಣೆಯ ಭಾಗ್ಯವ 

ನತ್ತು ನಗಗಳ ನೀಡುತಾ 

ಮುತ್ತೈದೆ ಭಾಗ್ಯವ ನೀಡಿ ಹರಸು ||೩||


ದೇವಿ ಶ್ರೀ ಮಹಾಲಕ್ಷಿಯೆ|ನಿನ್ನಡಿಗೆರಗಿ|

ಬೇಡುವೆ ಸುರಗಿ ಹೂವ 

ನಿನ್ನ ತರಳರ ಕಾಯ್ದು ಅನುದಿನ 

ಬನ್ನಗಳ ಪರಿಹರಿಸಿ ಪೊರೆಯುತ 

ಚೆನ್ನಕೇಶವನರಸಿ ಪದ್ಮಿನಿ 

ಜ್ಞಾನ ಕುಸುಮವ ನೀಡಿ ಹರಸು ||೪||










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು