|| ಮಂಗಳ ಸ್ತುತಿ ||
ಜಯ ಮಂಗಳವಾಗಲಿ|ಲೋಕಕ್ಕೆಲ್ಲ|
ಶುಭ ಮಂಗಳವಾಗಲಿ ||ಪ||
ಕಾಲ ಕಾಲಕೆ ಮಳೆಗಳಾಗಲಿ|
ಭೂಮಿ ಪೈರುಗಳೆಲ್ಲ ಕೊಡಲಿ |
ದೇಶವೆಲ್ಲ ಸುಭಿಕ್ಷವಾಗಲಿ |
ಸಜ್ಜನರು ನಿರ್ಭಯದಿ ಬಾಳಲಿ ||೧||
ಭರದಿಗೋ ಬ್ರಾಹ್ಮಣರಿಗೂ |
ಧರೆಯೊಳೆಲ್ಲಾ ಜನರಿಗೂ........... |
ನೆಲೆ ಸುಖಂಗಳು ಸಿದ್ಧಿಸಲಿ |
ಸುಖ ಶಾಂತಿ ಸಂತೋಷಗಳು ಒದಗಲಿ ||೨||
ಪುತ್ರರಾಗಲಿ ಪೌತ್ರರಾಗಲಿ |
ಶತೃ ಜನರು ಮಿತ್ರರಾಗಲಿ |
ಧನವಿಹೀನರು ಧನಿಕರಾಗಲಿ |
ಮುದದಿ ಶತ ವರ್ಷಗಳು ಬಾಳಲಿ ||೩||
ದಾಸ ಜನರಾನಂದದಿಂದಲಿ |
ರಾಮ ಚರಿತೆಯ ಪಾಡುತಿರಲಿ |
ದೇಶವೆಲ್ಲ ಸುಭೀಕ್ಷವಾಗಲಿ |
ಸಜ್ಜನರು ನಿರ್ಭಯಧಿ ಬಾಳಲಿ ||೪||
0 ಕಾಮೆಂಟ್‌ಗಳು