ಅಲಖ್‌ ನಿರಂಜನ ಘಿಳ್ ಘಿಳ್ ಗುಂಜನ - Alakh Niranjana Ghil Ghil Gunjana

ಅಲಖ್‌ ನಿರಂಜನ 
(ದೃಷ್ಟಿದಾನ) ಎಸಳು 




ಅಲಖ್‌ ನಿರಂಜನ ಘಿಳ್ ಘಿಳ್ ಗುಂಜನ 

ಭವ-ಭಯ-ಭಂಜನ ಬೈರಾಗಿ, 

ದಡದಡ ಬಂದನು, ದ್ವಾರದಿ ನಿಂದನು 

ಭಿಕ್ಷೆಯು ಎಂದನು ಆ ಜೋಗಿ ॥೧॥ 


ಕಾಮನೆ ಕಾವಿಯನುಟ್ಟನೊ, ತೊಟ್ಟನೊ 

ಸೋಮನೆ ಶಾಟಿಯ ಕಾಪಾಲಿ ! 

ಕಾವ್ಯವೆ ಕಾಯವ ಪಡೆದಿತೋ ಪಿಡಿದಿತೋ 

ರಸ ಖಷಿ ಕರವೇ ಜಪಮಾಲಿ | ॥೨॥ 


ಚಂದನ ಚರ್ಜಿತ, ಭಸ್ಮೋದ್ವರ್ಜಿತ 

ಬಂಧುರ ಸುಂದರ ಸನ್ಶಾಸಿ, 

ರಾಗ-ಭೋಗ ವಿಷ ವಿಷಯಗಳೆದೆಯನು 

ಮೆಟ್ಟುವವೋಲ್‌ ಪದ ವಿನ್ಶಾಸಿ ॥೩॥ 


ಚಂಡಮರೀಚಿಯೆ ದಂಡ ಕಮಂಡಲು 

ತಾಪಸ ವೇಷವ ತಳೆದಿಹನೆ ! 

ಸಂಧ್ಯಾ ರಾಗದ ಚಂದನ ತಂಪಿಗೆ 

ವೈಶ್ವಾನರ ತಪಕಿಳಿದಿಹನೆ ! ॥೪॥ 


ತರುಣಾ$ ರುಣ-ರುಚಿ-ರಂಜಿತ ರೂಪವು 

ಗರತಿಯ ಗೌರವ ಕೆಣಕಿತ್ತು 

ಸಂಯಮ-ಮುದ್ರಿತ-ಹೃದಯ ಕವಾಟದಿ 

ಕಾಮನ ಕಾರ್ಮುಕ ಮಣಿದಿತ್ತು ॥೫||


ವರ ವೈರಾಗ್ಯದ ಚಿರ ಸೌಭಾಗ್ಯಕ್ಕೆ 

ಶೃಂಗಾರವೇ ಶರಣಾಗಿತ್ತು, 

ಬ್ರಹ್ಮಜ್ಞಾನದ ಫಲ -ಪರಿಪಾಕಕೆ 

ತಾರುಣ್ಯವೇ ತಲೆ ಬಾಗಿತ್ತು. ॥೬॥ 


'ಅಲಖ್‌ ನಿರಂಜನ ಅಲಖ್‌ ನಿರಂಜನ' 

ಮಂಜುಳ ಗುಂಜನ ಗುಣಗಿತ್ತು 

ಬಾಲ ಕುತೂಹಲ ಕೆರಳಿಸಿ ಗಣ ಗಣ 

ಘಂಟಾ “ಕಿಂಕಿಣಿ ಕುಣಿದಿತ್ತು ||೭||


ಬಾಗಿಲು ತೆರೆಯಿತು, ಮುಂತೆರೆ ಸರಿಯಿತು 

ಜವನಿಕೆ ಜರೆಯಿತು ಮರೆಯಲ್ಲಿ 

ಪವನವು ಪುಳಕಿತು, ಬಳ್ಳಿಯು ಬಳುಕಿತು 

ತರುಲತೆ ತುಳುಕಿತು ತೆರೆಯಲ್ಲಿ ||೮||


ಉರ್ವಿಯ ಊರ್ವಶಿ, ರಂಜಿಪ ರೂಪಸಿ 

ರಾಗ ಪರಾಗವು ಪರಿಮಳಿಸಿ, 

ಬಂದಳು ಷೋಡಶಿ, ರಸ-ಸರ-ಸಾರಸಿ 

ಒಡೆಯನ ಪ್ರೇಯಸಿ ನಳ ನಳಿಸಿ ||೯||


ಮೃದು -ಮಂದಸ್ಮಿತ ಆನನ-ಕಾನನ -

ಕೆರೆ-ಕೆಂದಾವರೆ ಅರಳಿತ್ತು 

ಉಸುರಿನ ಗಂಧಕೆ ಮುಖ ಮಕರಂದಕೆ 

ಬಂಡುಣಿ ದಂಡದು ತೆರಳಿತ್ತು ||೧೦||


ಕರಿ ಹೊರೆ ಕೇಶ ಕಲಾಪದ ಕಂಪಿಗೆ 

ಸಂಪಿಗೆ ಸೊಂಪನು ಸುರಿದಿತ್ತು 

ನೀಲಿಮ-ಕುಂತಲ -ನಿಕಷದಿ 

ಬೈತಲು ಬಂಗಾರದ ಗೆರೆ ಕೊರೆದಿತ್ತು ||೧೧||


ಹೆಜ್ಜೆಯ ರಿಂಗಣ ಕಜ್ಜಕೆ ಗೆಜ್ಜೆಯ 

ಹಂಸವೆ ತಾಳವ ಹಿಡಿದಿತ್ತು. 

ಮುಗುದೆಯ ಮೈಸಿರಿ ನವಿಲಿನ ನಾಟ್ಕಕೆ 

ಕಾಮನ ಕೊಳಲದು ನುಡಿದಿತ್ತು. ||೧೨||



"ಗರತಿಯು ಗುರುತಿಲ್ಲದ ಪರ ಗುರುವಿಗೆ 

ಬಿಕ್ಕೆಯ ನಿಕ್ಕಳು” ಎಂದಂದು 

ಆಳಿನ ಕೈಯಲಿ ಕಾಳನು ಕಳುಹಿಸಿ * 

ಜೋಗಿಯ ಜೋಳಿಗೆ ತುಂಬೆಂದು ||೧೩||


ಜೋಗಿಯು ನಯನದ ನವ-ನೀಲಾಂಜನ 

ನಂದಾದೀಪವನೆತ್ತಿದನು, 

ಕಣ್ಣಿನ ಕಾಂತಿಯ ಹೊಳಪಿಗೆ ಕಾಮನು 

ಪ್ರೇಮದ ಗುಂಡಿಯನೊತ್ತಿದನು ||೧೪||


ಎದೆ 'ರುಲ್‌' ಎಂದಿತು, ಮೈ 'ಜುಂ' ಎಂದಿತು 

ಸಂಯಮ ಪಾಶವು ಸಡಿಲಿತ್ತು, 

ಕಂಗಳ ಮಂಗಳ ಕಾಂತಿಯ ಶಾಂತಿಯ 

ಕಡಲಿನ ಒಡಲಲಿ ಸಿಡಿಲಿತ್ತು ||೧೫||


ನಾಚಿಕೆ ನಲ್ಲೆಯ ಗಲ್ಲ ಗುಲಾಬಿಗೆ 

ಮೆಲ್ಲನೆ ಗುಲ್ಲನು ಕೊಟ್ಟಿತ್ತು 

ಸಂಜೆಯ ಛವಎ, ಗುಲಗಂಜಿಯ ರುಚಿ, 

ಮುಖ ಕುಂಕುಮ ಕರಡಿಗೆಯಾಗಿತ್ತು ||೧೬||


ಎದೆ ಕಾರಂಜಿಯು ರಾಗದ ರಸವನು 

ಕಣ್ಣಿನ ಕೆಂಪಿಗೆ ತೂರಿತ್ತು, 

ನಿಗ್ರಹ-ಪಂಜರ -ಬದ್ದ ವಿಹಂಗಮ " 

ಆಗಸದಂಗಳಕ್ಹಾರಿತ್ತು ||೧೭||


ಹೃದಯವು ಅದುರಿತು, ಧೈರ್ಯವು ಚದುರಿತು 

ಕೆದರಿತು ನೆಲವನು ಕೆಂಗಣ್ಣು, 

ಹಮ್ಮಿನ ಹೆಮ್ಮರ ಉರುಳಿತು, ನರಳಿತು 

ಚಿತ್ತದ ಚಂಚಲಕಾಠ ಹೆಣ್ಣು ||೧೮||


'ಅಲಖ್‌ ನಿರಂಜನ ಫಿಲ್‌ ಫಿಲ್‌ ಗುಂಜನ್‌ 

ಮುಂದಕೆ ಸಾಗಿದನಾ$* ಜೋಗಿ, 

ಹೃದಯದ ಗುಡಿಯಲಿ ಮದನನ ಗಂಟೆಯ 

ಢಣಡಣ ಬಾರಿಸಿ ತಿರುತಿರುಗಿ ||೧೯||


ಮನೆಯಲಿ ಯೋಚಿಸಿ, ಮನದಿ ವಿವೇಚಿಸಿ 

ತನ್ನಲಿ ತಾನೇ ನಾಚಿದಳು 

ಹಿಂದಿನ ಸತಿಯರ ಸುಂದರ ಗುಣಗಳ ಗಾನದಿ 

ಎದೆ ಮರೆ ಮಾಚಿದಳು ||೨0||


ಜೋಗಿಯ ಬೈದಳು, ಯೌವನ ಜರಿದಳು' 

ಜಾರಿದ ಹೃದಯವ ಹೀಗಳೆದು, 

"ಕಾಮನ ಕುಟ್ಟುವೆ, ಪ್ರೇಮವ ಮೆಟ್ಟುವೆ” 

ಎಂದಳು ಹಟದಿಂದೆದೆ ತುಳಿದು ||೨೧||


"ನಾಳೆಗೆ ಜೋಗಿಯು ಬಂದರೆ, ನಿಂದರೆ 

ನನ್‌ ದೊರೆಯಾಣೆಗೂ ನಾ ಕಾಣೆ, 

ಆಳಿನ ಕೈಯಲಿ ಕಾಳನು ಕಳುಹಿಸಿ 

ನುಗಿಸುವನಾಚೆಗೆ ನಾ ಜಾಣೆ" ||೨೨|| 


ಜಾಗ -೪ 


'ಅಲಖ್‌ ನಿರಂಜನ ಅಲಖ್‌ ನಿರಂಜನ' 

ಕಂಚಿನ ಕಂಠವು ಮೊಳಗಿತ್ತು 

ಹೆಣ್ಣಿನ ಕಣ್ಣಿಗೆ ಹಬ್ಬವ ಹಬ್ಬಿಸಿ 

ಮಿಂಚಿನ ಮೂರುತಿ ಬೆಳಗಿತ್ತು ||೨೩||


ಶಪಥವು ಮರೆಯಿತು, ಕುಪಥವು ತೆರೆಯಿತು 

ಕರೆಯಿತು ಕಿಂಕಿಣಿ ರುೋಂಕಾರ, 

ಕರಣವ ಎಳೆಯಿತು, ಹರಣವ ಸೆಳೆಯಿತು 

ಹೂಂಕರಿಸುವ ಸ್ಮರ ಟಂಕಾರ ||೨೪||


ನಿಲ್ಲದ ಮೇಲುದ ಮೆಲ್ಲನೆ ತೀಡುತ 

ಸಂದಳು ಪ್ರಣಯದ ರಂಗೇರಿ, 

ಕರದಲಿ ಕಾಳಿನ ಮೊರವನು ಮೆರೆಯಿಸಿ 

ಹೊಸ ಹೊಂಗನಸಿನ ಸಿಂಗಾರಿ ||೨೫||


ಜೋಗಿಯ ಜೋಳಿಗೆ ಜಾರನ ಜಾಳಿಗೆ 

ತೆರದಲಿ ನೀರೆಗೆ ತೋರಿತ್ತು 

ಅವನೆದೆ ಬರವನು ಹಿಂಗಿಸಿ ತೆರವನು 

ತುಂಬಲು ಎದೆ ರಸ ತೊರೆದಿತ್ತು ||೨೬||


ತನ್ನೆದೆ ಹಾಕಿದ ತೆರದಲಿ ಜೋಳಿಗೆ 

ತಳದಲಿ ಧಾನ್ಯವು ಬಿದ್ದಿತ್ತು. 

ಸತಿಯ ವಿವೇಕವು ಬದುಕಲು ಹಚ್ಚಿದ 

ಕಂಟಕದೋಲ್‌ ನವಿರೆದ್ದಿತ್ತು ||೨೭||


ಜೋಗಿಯ ವದನದ ತಬಕದಿ ಬೆಳಗುವ 

ಕಣ್ಣಣಿ ಆರತಿ ಬೆಳಗಿತ್ತು, 

"ತ್ವಂ ಸೌಭಾಗ್ಯವತೀ ಭವ !! "ಆಶಿಷ" 

ಕಂಠಾಕಾಪದಿ ಮೊಳಗಿತ್ತು  ||೨೮||


ಕಾಮನು ತರಳೆಯ ಕರುಳಿನ ಬೆರಳಿಗೆ 

ಕೊರಳಿನ ಮುರಳಿಯ ನುಡಿಸಿದನು, 

ಭಾವದ ಕಾವಿಗೆ ಕರಗಿದ ಚಿದ್ರಸ 

ಕಕ್ಷರ ಕವಚವ ತೊಡಿಸಿದನು.: ||೨೯||


"ನಿಲ್ಲೆಲೆ ಜೋಗಿಯೆ, ನಿನ್ನಯ ಕಣ್ಣಲಿ 

ಎಂತಹ ಕಾಂತಿಯು ಕುಣಿಯುತಿದೆ, 

ತೇಜಃ ಪುಂಜದ ಕಾಂತಿಎಲಾಸಕೆ 

ರವಿ ಶಶಿ ನೈದಿಲೆ ಮಣಿಯುತಿವೆ" ||೩೦||


"ಏನಿದು ಜ್ಯೋತಿಯು | ಚೆಲುವಿನ ಚಿಲುಮೆಯ 

ಚಿಮ್ಮಿಸಿ ಚಾಕ್ಷುಷ ಕುಕ್ಕಿಸಿದೆ 

ಕಂಜ ನಿಕುಂಜದ ಸಾರವ ಹೀರಿದೆ 

ಜೊನ್ನಿನ ಜೇಂಗಡಲುಕ್ಕಿಸಿದೆ ||೩೧||


"ಚಿಲುವಿಕೆ ಚಂಚಲತೆಗೆ ಕಣಕಟ್ಟಿದೆ 

ಮಿಂಚಿನ ಹೊಳೆ ಮಡುಗಟ್ಟಿಹುದು 

ವಿಧಿ ನಿನ್ನೋಟದ ತಟ್ಟೆಯಲೆಂತಹ ದೀಪದ 

ಕುಡಿಗಳನಿಟ್ಟಿಹುದು !" ||೩೨||


ಜೋಗಿಯು ಬೆಚ್ಚಿದ, ಕಣ್‌ ಕಿವಿ ಮುಚ್ಚಿದ 

ಹೆಣ್ಣಿನ ಮೆಚ್ಚಿಗೆ ಹುಚ್ಚಾದ 

ಹದಿಬದೆ ಧರ್ಮದ ಬಳ್ಳಿಗೆ ಕೊಳ್ಳಿಯ 

ಹಚ್ಚುವ ಕಾನನ ಕಿಚ್ಚಾದ ||೩೩||


ಭಾಗ -೫ 


'ಅಲಖ್‌ ನಿರಂಜನ, ಅಲಖ್‌ ನಿರಂಜನ' 

ಮರುದಿನ ಬಂದನು ಆ ಜೋಗಿ 

ಉಕ್ಕಿನ ಬಾಗಿಲು ಗಕ್ಕನೆ ತೆರೆಯಿತು 

ತವಕದಿ ಬಂದಳು ಅನುರಾಗಿ ||೩೪||


ಜೋಗಿಯನಿಬ್ಬರು ಜೊತೆಗಾರರು ತೋಳ್‌ 

ಪಿಡಿದೇ ನಡೆಸುತ ತರುತಿಹರು 

ಕಣ್ಣಿನ ಕಲಶವ ಮಣ್ಣಿಗೆ ಬಗ್ಗಿಸಿ 

ಬಾಷ್ಪ ಸ್ನಾನವ ನಡೆಸಿಹರು ||೩೫||


ಹಲ್ಲಣ ಹಾರಿತು, ತಲ್ಲಣಿಸಿತು ಎದೆ 

ನಿಲ್ಲದೆ ತೊಳಲಿದಳಾ€ ನಾರಿ 

'ಜೋಗಿಯೇ$ ನಿನಗೇನಾಗಿದೆ” ಎಂದಳು 

ಬಂದಳು ನಿಂದಳು ಬಳಿ ಸಾರಿ ||೩೬||


"ತಾಯಿಯೆ, ತೆಗೆದುಕೋ'ಎನ್ನುತ ಜೋಗಿಯು 

ನೀರೆಗೆ ಥಾಲಿಯ ಕೊಟ್ಟಿದ್ದ 

ಥಾಲಿಯ ತಳದಲಿ ಥಳ ಥಳ ಹೊಳೆಯುವ 

ಕಣ್ಣುಗಳೆರಡನು ಇಟ್ಟಿದ್ದ " ॥೩೭॥ 


ತಾಯಿಯೆ ನಿನ್ನೆಯ ದಿನ ನೀನೆನ್ನಯ 

ಕಣ್ಣಿನ ಬಣ್ಣನೆ ಮಾಡಿದ್ದಿ 

ಗರತಿಯ ಗೋರಿಯ ಕಟ್ಟಿದ ತೊಗಲಿನ 

ಆ ಕಣ್‌ ಕಿತ್ತಿದೋ ತಂದಿಹೆನು ॥॥೩೮॥ 


"ಅಲಖ್‌ ನಿರಂಜನ, ಅಲಖ್‌ ನಿರಂಜನ" 

ನಡೆದನು ನಿರ್ವಥೆಯಾಬೋಗಿ 

ತೊಗಲಿನ ಕಣ್‌ ಬಲಿಯಿಂದಲಿ, ಜ್ಞಾನದ 

ಒಳಗಣ್‌ ತೆರೆಯಿಸಿ ಕುರುಡಾಗಿ ||೩೯॥ 














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು