|| ಶ್ರೀರಾಮ ಸ್ತುತಿ ||
ರಾಮ ನಾಮ ಒಮ್ಮೆ ನುಡಿ ಮನ
ರಾಮ ನಾಮ ಒಮ್ಮೆ
ಮಿಡಿಯಲಿ ಹೃದಯದ ವೀಣೆಯೊಮ್ಮೆ ||ಪ||
ರಾ......... ಎನು ಮನವೇ
ರಾ......... ಎನು ಮನವೇ
ಬಾಯಿ ತೆರೆದು ಒಮ್ಮೆ
ಆಡಿದ ಮಾಡಿದ ನೋಡಿದ ಪಾಪವ
ಹೊರ ಹಾಯಲು ಬಿಡು ಒಮ್ಮೆ ||೧||
ಮ.......... ಎನು ಮನವೇ
ಮ.......... ಎನು ಮನವೇ
ಬಾಯಿ ಮುಚ್ಚಿ ಒಮ್ಮೆ
ಬರಲೊಲ್ಲದು ಹಾದು ಹೋದ ಪಾಪವು
ರಾಮ ಎನು ಇನ್ನೊಮ್ಮೆ ||೨||
ಗಿರಿಜೆಗೆ ಶಂಕರ ಬೋಧಿಸಿದಂತಹ
ತಾರಕ ಮಂತ್ರವನೊಮ್ಮೆ
ನೆನೆದು ನೆನೆದು ನೀ ಧನ್ಯನಾಗು ಮನ
ರಾಮ ಎನು ಇನ್ನೊಮ್ಮೆ ||೩||
0 ಕಾಮೆಂಟ್‌ಗಳು