|| ಆಂಜನೇಯ ಸ್ತುತಿ ||
ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮ ಮನೆಗೆ
ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ |ಪ.|
ಕನಕಾಲಂದುಗೆ ಝಣಝಣರೆನುತ
ಝಣಕು ಝಣಕು ಎಂದು ಕುಣಿ ಕುಣಿದಾಡುತ
ಝಣಕ್ಕು , ಝಣಕ್ಕು , ಝಣಕ್ಕು , ಝಣಕ್ಕು ಝಣಕ್ಕು ಎಂದು ಕುಣಿ ಕುಣಿದಾಡುತ
ಕುಣಿ ಕುಣಿದಾಡುತ ನಲಿ ನಲಿದಾಡುತ ||೧||
ತುಂಬುರು ನಾರದ ವೀಣೆ ಬಾರಿಸುತ
ವೀಣೆ ಬಾರಿಸುತ ನಲಿ ನಲಿದಾಡುತ
ಝಣಕ್ಕು , ಝಣಕ್ಕು , ಝಣಕ್ಕು , ಝಣಕ್ಕು ಝಣಕ್ಕು ಎಂದು ಕುಣಿ ಕುಣಿದಾಡುತ
ಕುಣಿ ಕುಣಿದಾಡುತ ನಲಿ ನಲಿದಾಡುತ||೨||
ಪುರಂದರವಿಠಲನ ನೆನೆದು ಪಾಡುತಲಿ
ನೆನೆದು ಪಾಡುತಲಿ ಆಲಿಂಗನ ಮಾಡುತಲಿ
ಝಣಕ್ಕು , ಝಣಕ್ಕು , ಝಣಕ್ಕು , ಝಣಕ್ಕು ಝಣಕ್ಕು ಎಂದು ಕುಣಿ ಕುಣಿದಾಡುತ
ಕುಣಿ ಕುಣಿದಾಡುತ ನಲಿ ನಲಿದಾಡುತ||೩||
0 ಕಾಮೆಂಟ್ಗಳು