ನಾಮವೇ ಪಾವನ ಶ್ರೀರಾಮನ - Namave Pavana Sri Ramana

|| ಶ್ರೀರಾಮ ಸ್ತುತಿ ||




ನಾಮವೇ ಪಾವನ ಶ್ರೀರಾಮನ ನಾಮವೇ ಪಾವನ॥ಪ॥  

ರಾಮನ ರವಿಕುಲ ಸೋಮನ ರಾಜಲಲಾಮನ 

ಶ್ಯಾಮನ ಜಗದಭಿರಾಮನ ॥ಅ॥ 


ಚಂದಿರವದನನ ಸುಂದರಾಂಗನ 

ಇಂದಿರದವನ ಮಂದಸ್ಮಿತನ

ಮೇರು ಗಂಭೀರನಾ ಪರಮ ಉದಾರನ 

ಮರಿಯಾದ ಪುರುಷೋತ್ತಮ ರಾಮನ ॥ಚ॥ 


ಹನುಮಂತ ವರದನ ಜಾನಕಿನಾಥನ 

ಮನ್ಮಥ ಜನಕನ ಲಕ್ಷ್ಮಣಾಗ್ರಜನ 

ಕಲಿಮಲ ಕಳೆಯಲು ಕಾಲುಶ್ಯ ಹರಿಸಲು 

ಸುಲಭದ ಭಕುತಿಗೆ ಒಲಿಯುವ ದೇವನ ॥ಚ॥ 


ಸರ್ವಾರೋಗಹರ ಮೃತ್ಯು ಭಯಹರನ 

ಮೃತ್ಯುಂಜಯ ಶಿವ ಸತತ ಜಪಿಸುವಂತ

ಶೇಷಾಗರುಡಾಸುರ ಸೇವಿತ ಸ್ವಾಮಿಯ 

ದಾಸ ಕೇಶವನುತ ಮಂಗಳ ಪ್ರದವಾದ ॥ಚ॥ 












ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು