|| ರಾಘವೇಂದ್ರ ರಾಯರ ಸ್ತುತಿ ||
ರಾಯರೇ ಗತಿಯು ನಮಗೆ ।
ವಾಯುಸುಮತೋದ್ಧಾರ ಶ್ರೀ ರಾಘವೇಂದ್ರ ಗುರು।।ಪ।।
ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ ।
ಯುಕುತಮಾಗಿಹ ಚೂತ ಸುಕುಜ ಗತಿಯೋ ।
ಮುಕುತಿಗೆ ಸುಜ್ಞಾನ ಭಕುತಿ ವಿರುಕುತಿ ಗತಿಯು ।
ಅಕಳಂಕ ಶ್ರೀಮಂತ ಮಂದಿರದಿ ನೆಲಸಿಪ್ಪ ।।೧।।
ಋಷಿಗಳಿಗೆ ಪ್ರಣವವೇ ಗತಿ ಝಷಗಳಿಗೆ ಜಲವೇ ಗತಿ|
ಸಸಿಗಳಭಿವೃದ್ಧಿಗೆ ಶಶಿಯೇ ಗತಿಯು ।
ಶಿಶುಗಳಿಗೆ ಜಲವೆ ಗತಿ ಪಶುಗಳಿಗೆ ತೃಣವೆ ಗತಿ ।
ಈಸು ಮಹಿಮೆಲಿ ಮೆರೆವ ಮಿಸುನಿ ಶಯ್ಯಜರಾದ ।।೨।।
ಕಾಮಿನೀ ಮಣಿಯರಿಗೆ ಕೈಪಿಡಿದ ಕಾಂತ ಗತಿ ।
ಭೂಮಿ ವಿಬುಧರಿಗೆ ಮಧ್ವ ಶಾಸ್ತ್ರ ಗತಿಯೋ ।
ತಾಮರಸ ಸಖ ಸುತನ ಭಯ ಪೋಪುವುದಕೆ ।
ಶ್ರೀ ಶ್ಯಾಮಸುಂದರ ವಿಠ್ಠಲ ಸ್ವಾಮಿ ನಾಮವೇ ಗತಿಯೋ।।೩।।

0 ಕಾಮೆಂಟ್‌ಗಳು