ನಾರಾಯಣ ಗೋವಿಂದ ಹರಿ - Narayana Narayana Govinda Hari

 || ಗೋವಿಂದ ಸ್ತುತಿ ||




ನಾರಾಯಣ ನಾರಾಯಣ  ಗೋವಿಂದ

ಹರಿ ನಾರಾಯಣ ಗೋವಿಂದ || ಪ. ||


ನಾರಾಯಣ ಗೋವಿಂದ ಗೋವಿಂದ ಮುಕುಂದ

ಪರತರ ಪರಮಾನಂದ || ಅ. ಪ.||


ಮೊದಲು ಮತ್ಸ್ಯನಾಗಿ ಉದಿಸಿ ಸೋಮನ

ಸದೆದು ವೇದಗಳ ತಂದ ||

ಮಂದರಧರ ತಾ ಸಿಂಧುವಿನೊಳಮೃತ

ತಂದು ಭಕ್ತರಿಗೆ ಉಣಲೆಂದ 

ನಾರಾಯಣ ನಾರಾಯಣ ಗೋವಿಂದ ಮತ್ಸ್ಯ

ನಾರಾಯಣ ನಾರಾಯಣ ಗೋವಿಂದ 

ನಾರಾಯಣ ನಾರಾಯಣ ಗೋವಿಂದ ಕೂರ್ಮ 

ನಾರಾಯಣ ನಾರಾಯಣ ಗೋವಿಂದ || ೧ ||


ಭೂಮಿಯ ಕದ್ದ ಖಳನನು ಮರ್ದಿಸಿ

ಆ ಮಹಾ ಸತಿಯಳ ತಂದ ||

ದುರುಳ ಹಿರಣ್ಯನ ಕರುಳ ಬಗೆದು

ತನ್ನ ಕೊರಳೊಳಿಟ್ಟ ಬಗೆಯಿಂದ 

ನಾರಾಯಣ ನಾರಾಯಣ ಗೋವಿಂದ ವರಹ 

ನಾರಾಯಣ ನಾರಾಯಣ ಗೋವಿಂದ 

ನಾರಾಯಣ ನಾರಾಯಣ ಗೋವಿಂದ ನರಹರಿ 

ನಾರಾಯಣ ನಾರಾಯಣ ಗೋವಿಂದ || ೨ ||


ಪುಟ್ಟನಾಗಿ ಮಹಿ ಕೊಟ್ಟ ಬಲಿಯ ತಲೆ

ಮೆಟ್ಟಿ ತುಳಿದ ಬಗೆಯಿಂದ ||

ಧಾತ್ರಿಯೊಳು ಮುನಿಪುತ್ರನಾಗಿ ಬಂದು

ಕ್ಷತ್ರಿಯರೆಲ್ಲರ ಕೊಂದ 

ನಾರಾಯಣ ನಾರಾಯಣ ಗೋವಿಂದ ವಾಮನ 

ನಾರಾಯಣ ನಾರಾಯಣ ಗೋವಿಂದ 

ನಾರಾಯಣ ನಾರಾಯಣ ಗೋವಿಂದ ಭಾರ್ಗವ

ನಾರಾಯಣ ನಾರಾಯಣ ಗೋವಿಂದ|| ೩ ||


ಮಡದಿಗಾಗಿ ಸರಗಡಲನೆ ಕಟ್ಟಿ

ಹಿಡಿದು ರಾವಣನ ಕೊಂದ ||

ಗೋಕುಲದಿ ಹುಟ್ಟಿ ಗೋವ್ಗಳ ಕಾಯ್ದ

ಗೋಪಾಲಕೃಷ್ಣ ತಾ ಬಂದ 

ನಾರಾಯಣ ನಾರಾಯಣ ಗೋವಿಂದ ರಾಮ

ನಾರಾಯಣ ನಾರಾಯಣ ಗೋವಿಂದ 

ನಾರಾಯಣ ನಾರಾಯಣ ಗೋವಿಂದ ಕೃಷ್ಣ

ನಾರಾಯಣ ನಾರಾಯಣ ಗೋವಿಂದ|| ೪ ||


ಛಲದಲಿ ತ್ರಿಪುರರ ಸತಿಯರ ವ್ರತದ

ಫಲವನಳಿದ ಬಗೆಯಿಂದ ||

ಧರೆಯೊಳು ಪರಮ ನೀಚರ ಸವರೆ

ಕುದುರೆಯೇರಿದ ಕಲಿ ಚಂದ 

ನಾರಾಯಣ ನಾರಾಯಣ ಗೋವಿಂದ ಬುದ್ಧ 

ನಾರಾಯಣ ನಾರಾಯಣ ಗೋವಿಂದ 

ನಾರಾಯಣ ನಾರಾಯಣ ಗೋವಿಂದ ಕಲ್ಕಿ

ನಾರಾಯಣ ನಾರಾಯಣ ಗೋವಿಂದ|| ೬ ||


ದೋಷದೂರ ಶ್ರೀಪುರಂದರವಿಠಲ

ಪೋಷಕ ಭಕ್ತ ಸುವೃಂದ 

ನಾರಾಯಣ ನಾರಾಯಣ ಗೋವಿಂದ ಶ್ರೀಮನ್ 

ನಾರಾಯಣ ನಾರಾಯಣ ಗೋವಿಂದ ಭಜಮನ್ 

ನಾರಾಯಣ ನಾರಾಯಣ ಗೋವಿಂದ || ೭ ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು