|| ತತ್ವ ಪದ ||
ಕೇಳಬೇಕು | ಕೇಳಬೇಕು | ಕೇಳಬೇಕು |
ನಾದ ಕೇಳಬೇಕು ॥ ಮೂಲ ಬ್ರಹ್ಮಾದಿ ಮನ |
ಲೈಸಬೇಕು | ಓಲೈಸಬೇಕು ॥ ಕೇಳಬೇಕು ॥
॥ವಾಚಾದಿಂದಲಿ ಮುಕ್ತಿಯಾಗುವುದೇ ।
ವಸ್ತು ತೋರುವುದೇ ॥॥
ಯೋಚಿಸಿ ದೃಷ್ಟಿಮನ । ನಿಲ್ಲಿಸದೇ ।
ಧ್ಯಾನ ಬದಲಿಸದೇ ॥ ಕೇಳಬೇಕು॥
॥ಒಡಲಿನೊಳಗೆ ಪರಶಿವನಿಹನು ।
ತಾನೇ ಸಾಕ್ಷಿ ಇಹನು ॥
ಪೊಡವಿ ಮಾನವನಿದ ಕಾಣದಿಹನು ।
ಮುಂದುಗಾಣದಿಹನು ॥ ಕೇಳಬೇಕು ॥
॥ ಅಷ್ಟ ಮದಂಗಳ ಅಟ್ಟಬೇಕು ।
ಬಲ್ ಘಟ್ಟಿ ಬೇಕು॥ ಭ್ರಷ್ಟಾರ ರೈವರ ಕಟ್ಟಬೇಕು ।
ಬೇಗ ಕಟ್ಟಬೇಕು ॥ ಕೇಳಬೇಕು ॥
॥ಸೂಸುತಿಹ ವಾಯುಕಂಡು ಹಿಡಿಯಬೇಕು ।
ಅಲ್ಲಿ ತಡೆಯಬೇಕು ||
ಭೂಸುರ ಪ್ರಭೆಯೊಳು ಹೊಳೆಯಬೇಕು |
ನಿಜವ ತಿಳಿಯಬೇಕು ॥ ಕೇಳಬೇಕು ॥
ಕಂಗಾಳ ಮಧ್ಯದಿ ಕಾಣಬರುವ|ಕಳೆಗೂಡಿ ಬರುವಾ॥
ಶೃಂಗಾರ ಗುರುಮಹಲಿಂಗ ನಿರುವ ।
ತಾನೆಂದು ಮೆರೆವಾ ॥ ಕೇಳಬೇಕು ॥

0 ಕಾಮೆಂಟ್‌ಗಳು