|| ಹನುಮ ಸ್ತುತಿ ||
ಹನುಮಾ ಪಂಡಿತ ಬಂದ ನೋಡೆ |
ಇದು ಎಷ್ಟು ಜನ್ಮದ ಸುಕೃತವೇ ಭಾಮೆ |
ಹನುಮಾ ಪಂಡಿತ ಬಂದ ನೋಡೆ ||
ಉದಯ ಕಾಲದೊಳೆದ್ದು ಕುಳಿತು |
ಹಸ್ತ ಪಿಡಿದು ರೋಗ ಪೇಳುತ |
ಉದಯ ಕಾಲದೊಳೆದ್ದು ಕುಳಿತು |
ಹಸ್ತ ಪಿಡಿದು ರೋಗ ಬೇಳುತ |
ವಾತ ಪಿತ್ಥವೆಂಬ ರೋಗಕ್ಕೆ ಮಾತ್ರೆ ಕೊಟ್ಟ ಮಾರುತೀಶಾ |
ವಾತ ಪಿತ್ಥವೆಂಬ ರೋಗಕ್ಕೆ ಮಾತ್ರೆ ಕೊಟ್ಟ ಮಾರುತೀಶಾ |
ಹನುಮಾ ಪಂಡಿತ ಬಂದ ನೋಡೆ |
ಇದು ಎಷ್ಟು ಜನ್ಮದ ಸುಕೃತವೇ ಭಾಮೆ |
ಹನುಮಾ ಪಂಡಿತ ಬಂದ ನೋಡೆ ||
ಜ್ಞಾನವೆಂಬೊ ಕಲ್ಲಿನ ಮೇಲೆ |
ರಾಮನೆಂಬೊ ರಸವನರೆದು |
ಜ್ಞಾನವೆಂಬೊ ಕಲ್ಲಿನ ಮೇಲೆ |
ರಾಮನೆಂಬೊ ರಸವನರೆದು |
ವಿಧಿಯೆಂಬ ರೋಗಕ್ಕೆ ಮಾತ್ರೆ ಕೊಟ್ಟ ಮಹಾನುಭಾವ |
ವಿಧಿಯೆಂಬ ರೋಗಕ್ಕೆ ಮಾತ್ರೆ ಕೊಟ್ಟ ಮಹಾನುಭಾವ ||
ಗುಣವಾಯಿತು ಎನ್ನ ಭವರೋಗ ಎನ್ನ |
ಪಾರುಗಾಣಿಸೊ ಎನ್ನ ಪುರಂದರ ವಿಟ್ಠಲ |
ಪಾರುಗಾಣಿಸೊ ಎನ್ನ ಪುರಂದರ ವಿಟ್ಠಲ |
ಗುಣವಾಯಿತು ಎನ್ನ ಭವರೋಗ |
ಗುಣವಾಯಿತು ಎನ್ನ ಭವರೋಗ ಎನ್ನ |
ಪಾರುಗಾಣಿಸೊ ಪುರಂದರ ವಿಟ್ಠಲ |
ಪಾರುಗಾಣಿಸೊ ಎನ್ನ ಪುರಂದರ ವಿಟ್ಠಲ |
ಪಾರುಗಾಣಿಸೊ ಎನ್ನ ಪುರಂದರ ವಿಟ್ಠಲ |
ಹನುಮಾ ಪಂಡಿತ ಬಂದ ನೋಡೆ |
ಇದು ಎಷ್ಟು ಜನ್ಮದ ಸುಕೃತವೇ ಭಾಮೆ |
ಹನುಮಾ ಪಂಡಿತ ಬಂದ ನೋಡೆ ||

0 ಕಾಮೆಂಟ್‌ಗಳು