|| ಗೋವಿಂದ ಸ್ತುತಿ ||
ಕೀರ್ತನಕಾರರು : ವಾದಿರಾಜರು
ಬಾರೋ ಮುರಾರಿ ಬಾಲಕ ಶೌರಿ
ಸಾರ ವಿಚಾರಿ ಸಂತೋಷಕಾರಿ ।।ಪ॥
ಆಟ ಸಾಕೇಳೋ ಮೈಯೆಲ್ಲ ಧೂಳೋ
ಊಟ ಮಾಡೇಳೊ ಕೃಷ್ಣ ಕೃಪಾಳೊ ।।ಅ.ಪ॥
ಅರುಣಾಬ್ಜಚರಣ ಮಂಜುಳಾಭರಣ
ಪರಮ ವಿತರಣ ಪನ್ನಗಶಯನ
ಮನೆಗೆದ್ದು ಬಾರೋ ಕೊನೆಗಯ್ಯ ತೋರೋ
ಚಿನ್ಮಯ ಬಾರೋ ನಗೆಮುಗ ತೋರೋ ।।೧।।
ವೆಂಕಟರಮಣ ಸಂಕಟಹರಣ
ಕಿಂಕರಾಮರಗಣ ವಂದಿತಚರಣ
ಅರವಿಂದನಯನ ಶರದೇಂದುವದನ
ವರಯದುಸದನ ಸಿರಿ ಹಯವದನ ।।೨।।

0 ಕಾಮೆಂಟ್‌ಗಳು