|| ದೇವಿ ಸ್ತುತಿ ||
ದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ
ಹೂವ ಕೊಡೆ ತಾಯಿ ವರವ ಕೊಡೆ||
ಅಂದಣ ರಥ...ಬಂದ್ಹೋಗುವೋ ಹೆಣ್ಣು ಮಕ್ಕಳು
ಬಂಧುಗಳಿಗೆಲ್ಲ ಬಲುಕ್ಷೇಮ
ಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆ
ಇಂದಿರಾದೇವಿ ದಯಮಾಡೆ ||
ದಂಪತಿ ನಲಿಸುತ ಸಂಪತ್ತು ಸೌಭಾಗ್ಯ
,ಇಂಥ ಮಂದಿರಕೆ ಬಹುಮಾನ
ಇಂಥ ಮಂದಿರಕೆ ಬಹುಮಾನಯಿರುವಂತೆ
ಸಂತೋಷದಿ ವರವ ದಯಮಾಡೆ ||
ಅನ್ನ ಗೋವ್ಗಳು ದಿವ್ಯ ಕನ್ಯಾ ಭೂದಾನ
ಹಿರಣ್ಯದಾನಗಳ ಹಿತದಿಂದ
ಹಿರಣ್ಯದಾನಗಳ ಹಿತದಿಂದ ಮಾಡುವಂತೆ
ಸಂಪನ್ನೇ ನೀ ವರವ ದಯಮಾಡೆ ||
ಇಂದಿಗೆ ಮನೋಭೀಷ್ಟ ಎಂದೀಗೆ ನಿನ್ನಪಾದ
ಹೊಂದಿರಲೆಂದೂ ಮರೆಯದೆ
ಹೊಂದಿರಲೆಂದೂ ಮರೆಯದೆ ಭೀಮೇಶ
ಕೃಷ್ಣನ-ರ್ಧಾಂಗಿ ದಯಮಾಡೆ ||

0 ಕಾಮೆಂಟ್‌ಗಳು