ಮಹಾದೇವಿ ಮಧುಕರಿಯೇ - Mahadevi Madhukar Madhukaiye

|| ದೇವಿ ಸ್ತುತಿ ||



ಮಹಾದೇವಿ ಮಧುಕರಿಯೇ 

ಮಂದರೋಧರಳೆ ಮಹಾ ಮಹಿಮಳೆ

ಮಾನ್ಯೆ ಮಹಾಗೌರಿಯೆ

ಮೋಹ ಮಾಯೆಯ ನೀಗು ಮಾತೆ ಮಂಗಳದಾತೆ

ಮಹಾದೇವನರ್ಧಾಂಗಿ ಮಾತಂಗಿಯೇ ||ಪ||


ಶ್ರೀಕರಿ ಶುಭಕರಿ ಶ್ಯಾಮ ವಿಶ್ವೇತಾಂಬರಿ

ಮೂಕಾಂಬಿಕೆ ಪಾಹಿ ಪರಿಪೂರ್ಣಳೆ

ತಾಕದಿರುವಂತೆ ತಾಪತ್ರಯಗಳನ್ನು ತರಿದು

ಸಾಕಾರ ಬುದ್ಧಿಯನ್ನು ನೀಡುವವಳೇ ||೧||


ಪಾರುಗಾಣಿಸು ಪಾವನೆ  ಪಾಪನಾಶಿನಿಯೇ

ಘೋರ ಪಾತಕ ಹಾರಿ ಬನಶಂಕರಿ

ಹರಿನೀಶ ಕೃಷ್ಣನ ನಾಮ ಸಾರಾಮೃತವನು

ಮರೆಯದಂತಿರಿಸಮ್ಮ ಶಿವಶಂಕರಿ ||೨||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು