belaguru bhajan lyrics, kannada bhajan lyrics, kolu kolennire song lyrics |
|| ತತ್ವ ಪದ ||
ರಾಗ : ಗೌಳ
ತಾಳ :- ಆದಿ
|| ಕೋಲು ಕೋಲೆನ್ನಿರೇ ಸದ್ಗುರುವಿನ
ಕೀಲು ಮೇಲೆನ್ನಿರೇ ||
ಹತ್ತಿ ಬಿತ್ತಿರರಿವೆ ಕಾಣೆ | ಬತ್ತ ಬಿತ್ತಿರ್ ಬಾನ ಕಾಣೆ ||
ಮನೆ ತುಂಬಾ ಮಕ್ಕಳಾದ್ರೆ |
ಗಂಡನ ಸುಖವಾ ಮೊದಲೇ ಕಾಣೆ || ಪ ||
ಗಂಡ ದಂಡಿಗ್ಹೋಗುವಾಗ|ಅರಗಿನ ಮುದ್ರೆ ಮಾಡಿ ಹೋದ ||
ಅರಗಿನ ಮುದ್ರೆ ಹೊಡೆದುಕೊಂಡು|ಆರು ಮಕ್ಳ
ತಾಯಿಯಾದ್ಲು || ಕೋಲು ಕೋಲೆನ್ನಿರೇ || ೧.
ದಂಡಿಗ್ಹೋಗೋ ಅಣ್ಣಗಳಿರಾ|
ದಂಡಿಗ್ಹೋಗೋ ಅಪ್ಪಗಳಿರಾ ||
ದಂಡ್ನಲ್ಲಿದ್ದ ಗಂಡನ್ ಬಿಟ್ಟು|ಮಿಂಡನ್ ಕಟ್ಕೊಂಡ್ಹೋದ್ಲು ||
ಕೋಲು ಕೋಲೆನ್ನಿರೇ || ೨.
|| ಅತ್ತೆ ಹೆಸರು ಹರಕಲು ಚಾಪೆ |
ಮಾವನ್ ಹೆಸರು ಮಂಚದ ಕಾಲು ||
ಗಂಡಾನ್ ಹೆಸರು ಗುಂಡಾಗುಂಡಿ |
ನನ್ನಾ ಹೆಸರು ಮತ್ತಿ ಚೆಂಡು||ಕೋಲು ಕೋಲನ್ನಿರೇ ||೩.
0 ಕಾಮೆಂಟ್‌ಗಳು