ಸದ್ಗುರು ಭಜನೆ -- ಗುರುದೇವ ನಿಮ್ಮಯ ಚರಣ,Gurudeva Nimmaya Charana


Sadguru bhajan -- Gurudeva Nimaaya charana song lyrics in kannada, belaguru bhajan lyrics,kannada bhajan lyrics
belaguru bhajan lyrics , kannada bhajan lyrics, gurudeva nimmaya charang song lyrics


|| ಗುರು ಸ್ತುತಿ ||

ರಾಗ :- ಬಿಲಹರಿ
ತಾಳ :- ಆದಿ

|| ಗುರುದೇವ ನಿಮ್ಮಯ ಚರಣ |
ಸ್ಮರಣೆಯ ಮಾಡುವೆ ನಾವು ||
ಪರಿಹರಿಸೋ | ಜನನಾ | ಮರಣಾ ||
ದಯ ಮಾಡು ಅಂತಃಕರಣ ||
ಕೃಪೆ ಮಾಡು ಅಂತಃಕರಣ ||
ಗುರುದೇವ || ಪ ||

1. || ನವಖಂಡ ಬ್ರಹ್ಮಾಂಡಗಳು | ಪಿಂಡಾಂಡದೊಳಗಡಗಿಹವು ||
|| ಅಖಂಡ ಮೂರುತಿ ನೀನು |
 ನಿಮ್ಮ ಸೇವೆಯೊಳಿರುವೆವು ನಾವು ||
ನಿಮ್ಮ ಧ್ಯಾನದೊಳಿರುವೆವು ನಾವು
|| ಗುರುದೇವ ||

2. ಅರಿತು ಅರಿಯದವ ನಾವು ||
ಬೆರೆತು ಬೆರೆಯದವ ನೀನು ||
ಪರಿತಾಪಿ ಬೇಡುವೆ ನಾವು |
ಪರಮಾಮೃತವನು ಕೊಡು ನೀನು ||
ನೀ ಮೋಕ್ಷವ ಕೊಡು ಪರಮೇಶ ||
 ಗುರುದೇವ ||

3. || ಧರೆಯೋಳು ಒಳ ಮಠಧೀಶ |
ನಿಮ್ಮ ಸೇವೆಯಲಿರುವೆವು ದಾಸ
ನಿಮ್ಮ ದಾಸರ ದಾಸರ ಕೂಸಾ |
ನೀ ಮೋಕ್ಷವ ಕೊಡು ಜಗದೀಶ ||
ನೀ ಮೋಕ್ಷವ ಕೊಡು ಪರಮೇಶ ||
ಗುರುದೇವ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು