kannadabhajanlyrics.blogspot.com |
।। ಹನುಮ ಸ್ತುತಿ ।।
ರಾಗ :- ಕಾಮವರ್ಧಿನಿ
ತಾಳ : - ಆದಿ
।। ಆಂಜನೇಯ ಹನುಮಂತ
ಶ್ರೀರಾಮಚಂದ್ರರ ಸದ್ಭಕ್ತ ।।
।। ವಾಯುಪುತ್ರ ಸುಚರಿತ್ರ ।।
ಭಾವ ವಿರಂಜಿತ ಸುಪವಿತ್ರ ।। ಪ ।।
೧. ।।ಸುಗ್ರೀವ ಸಖ ರಘು ರಾಮ ದೂತ ।
ಶರಧಿ ಲಂಘಿಸಿದ ಬಲವಂತ ।।
ಜನನಿಗುಂಗುರವ ನಿತ್ತ ಭಕ್ತ ।
ರಾವಣ ವಿರೋಧಿ ಸರ್ವಶಕ್ತ ।।
೨. ।। ರಾಮನಾಮವನು ಪಾನಗೈವ ।
ರಾಮ ಚರಣದಾ ಸೇವೆ ಗೈವಾ ।।
।। ರಾಮಾಯಣ ಕಥೆ ಶ್ರವಣಿಸುವ ।
ಭಕ್ತ ಜನಕೆ ಸುಖ ಕರುಣಿಸುವ ।।
೩. ।। ಭಾಸುರ ತೇಜನೆ ಹನುಮಂತ ।
ಕ್ಲೇಶ ಹರಿಸು ಪ್ರಭು ಹನುಮಂತ ।।
ದಾಶರಥಿಯ ದೂತ ಹನುಮಂತ ।
ದಾಸ ಕೇಶವ ನುತ ಹನುಮಂತ ।।
0 ಕಾಮೆಂಟ್‌ಗಳು