Bindu madhava virchitha -- ಎಲ್ಲಾರು ಸೇರಿ ಮಾಡೋಣ ಬನ್ನಿ-Ellaru seri madona banni song lyrics in kannada


kannadabhajanlyrics.blogspot.com
kannadabhajanlyrics.blogspot.com

|| ಹನುಮ ಸ್ತುತಿ ||
 ಸದ್ಗುರು ಬಿಂದು ಮಾಧವರ  ವಿರಚಿತಆದಿ

ರಾಗ : ದೇಶ್
ತಾಳ : ಆದಿ 

|| ಎಲ್ಲಾರು ಸೇರಿ ಮಾಡೋಣ ಬನ್ನಿ |

ಹನುಮನ ಗುರುಧ್ಯಾನ ||

||ಭಕ್ತಿಯಿಂದ ಭಜನೆಯ ಮಾಡಿ|

ಸೇರೋಣ ಕೈಲಾಸ || ಪ ||



ಇರುವೆ ಎಂಬತ್ತು ಲಕ್ಷ|ಜೀವರಾಶಿ ಯೋನಿಯೊಳಗೆ|

ತಿರುಗಿ ಬಂದ ದೇಹವು | ಬಹು ನಾಶ ||

ಎದ್ದರೆ ಬಿದ್ದರೆ | ಹನುಮನ ನೆನೆದರೆ |

ಆವಾಗ ಆಗುವುದು ಮೋಕ್ಷ || ಎಲ್ಲಾರು || ೧.



ಮರದ ಮೇಲಿನ | ಪಕ್ಷಿ ಹಾರಿದ್ಹಂಗೆ |

ಹಾರುತೈತೆ ಮನಸಾ |

ಬೆಲಗೂರ್ ಹನುಮನ|ವಾಕ್ಯವ ಪಡೆದು |

ಕಳಕಳ್ಳೊ | ನಿನ್ನ ದೋಷ || ಎಲ್ಲಾರು ಸೇರಿ|| ೨.



ಸಂಸಾರೆಂಬುದು|ಸತ್ಯವಲ್ಲ|

ಮಾಯದ ಬಹು ಮೋಸ ||

ಬೆಲಗೂರ್ ಹನುಮನ|ಪಾದವ ಪಿಡಿದು |

ಕಳಕೊಳ್ಳೊ ನಿನ್ನ ದೋಷ || ಎಲ್ಲಾರು || ೩.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು