belaguru bhajan lyrics, kannada bhajan lyrics, ambigaa naa ninna nambide song lyrics in kannada |
।। ಹರಿನಾಮ ಸ್ತುತಿ ।।
ರಾಗ :- ಉದಯರವಿಚಂದ್ರಿಕೆ
ತಾಳ :- ಆದಿ
ತಾಳ :- ಆದಿ
।। ಅಂಬಿಗಾ ನಾ ನಿನ್ನ ನಂಬಿದೆ ।
ಜಗದಂಬಾ ರಮಣ ನಿನ್ನ ನಂಬಿದೆ ।। ಪ ।।
೧. ।। ತುಂಬಿದ ಹರಿಗೋಲಂಬಿಗಾ ।
ಅದಕ್ಕೊಂಬತ್ತು ಛಿದ್ರ ಛಿದ್ರಗಳಂಬಿಗಾ ।।
ಸಂಭ್ರಮದಿಂದ ನೋಡಂಬಿಗಾ ।
ಅದರಿಂಬು ನೋಡಿ ನಡೆಸಂಬಿಗಾ ।।
೨. ।। ಆರು ತೆರೆಯ ನೋಡಂಬಿಗಾ ।
ಅದು ಏರಿ ಬರುತಲಿದೆ ಅಂಬಿಗಾ ।।
।। ಆರಿಂದಲಾಗದು ಅಂಬಿಗಾ ।
ಅದ ನೀವಾರಿಸಿ ದಾಟಿಸಂಬಿಗಾ ।।
೩. ।। ಹೊಳೆಯಾ ಭರವ ನೋಡಂಬಿಗಾ ।
ಅದರ ಸೆಳವು ಘನವಯ್ಯ ಅಂಬಿಗಾ ।।
ಸುಳಿಯೊಳು ಮುಳುಗಿದೆ ಅಂಬಿಗಾ ।।
ಎನ್ನ ಸೆಳೆದು ಕೊಂಡೊಯ್ಯೊ । ನೀ ಅಂಬಿಗಾ ।।
೪. ।। ಸತ್ಯವೆಂಬುದೆ ಹುಟ್ಟಂಬಿಗಾ ।।
ಸದ್ಭಕ್ತಿ ಎಂಬುದೆ ಪಥವಂಬಿಗಾ ।।
ನಿತ್ಯ ಮಾರುತಿ । ನಮ್ಮ ಪುರಂದರ ವಿಠಲನ ।
ಮುಕ್ತಿ ಮಂಟಪಕೊಯ್ಯೋ ಅಂಬಿಗಾ ।।
0 ಕಾಮೆಂಟ್‌ಗಳು