।। ಹಿಮಗಿರಿಯಾ ಶೃಂಗ ।।
।। ಹಿಮಗಿರಿಯಾ ಶೃಂಗ । ದೇವನದಿ ಗಂಗಾ ।।
।। ಮನದಲಿ ಮೂಡಿದ । ಭಾವ ವಿನೂತನ ।।
ಅನುಪಮ ಉತ್ತುಂಗ ।। ಪ ।।
।। ದಿವ್ಯ ಸನಾತನ ಸಂಸ್ಕೃತಿಗೆ
ವೇದ ಪುರಾಣವೆ ಸಾಕ್ಷಿ ।।
।। ಹಿಂದುವಿನುನ್ನತಿ ಅವನತಿಗೆ
ಸಾಕ್ಷಿ ಹಿಮಾದ್ರಿಯ ಶಿಖರಗಳು ।।
।। ಅಂಜುವ ಎದೆಯಲಿ ಧೈರ್ಯದ ಪಂಜನು
ಉರಿಸುವ ಮಂಜಿನ ಮಹಲುಗಳು
ಉರಿಸುವ ಮಂಜಿನ ಮಹಲುಗಳು ।। ೧ ।।
।। ಆ ಸುರಲೋಕವ ಮೀರಿಸುವಾ
ನಾಡಿಗೆ ಧುಮುಕಿದ ಭಾಗೀರಥಿ
।। ಭಾರತ ಮಾತೆಯ ಸಂಗದಲಿ
ಧನ್ಯತೆಯಾಂತಿಹ ಭಾಗ್ಯವತಿ
।। ಹಿಂದೂ ದೇಶದ ಕಣಕಣ ಜನುಮನ
ಪಾವನಗೊಳಿಸಿದ ಪುಣ್ಯವತೀ ।। ೨ ।।
।। ಸೋಲೇ ಗೆಲುವಿನ ಸೋಪಾನ ।
ದುಡುಕದೆ ನಡೆ ನೀ ಜೋಪಾನ ।।
।। ನೋವಲಿ ನೊಂದಿಹ ಬಂಧುವಿಗೆ
ನೀಡುತ ಧೈರ್ಯ ಸಮಾಧಾನ ।।
।। ಮಾತೆಯ ಗೌರವ ರಕ್ಷಣೆಗಾಗಿ
ಮುಡಿಪಾಗಿರಲೆಮ್ಮೆಯ ಪ್ರಾಣ ।। ೩ ।।
0 ಕಾಮೆಂಟ್‌ಗಳು