ಹನುಮ ವೀರಮಲ್ಲ ಅವನಿಗೆ ಎದುರಾರಿಲ್ಲ-Hanuma veeramalla


|| ಹನುಮ ಸ್ತುತಿ ||

ರಾಗ :- ರೇವತಿ

ತಾಳ :- ಆದಿ


kannadabhajanlyrics.blogspot.com
kannadabhajanlyrics.blogspot.com, belaguru Swamiji images 

 








|| ಹನುಮ ವೀರಮಲ್ಲ | ಅವನಿಗೆ ಎದುರಾರಿಲ್ಲ ||

ಜಾನಕಿ ಪತಿ ಬಲ್ಲಾ|ಮಾರುತಿ|ವೀರ ಚರಿತೆಯೆಲ್ಲಾ||ಪ||



||ತುಂಬಿದ ಮೈಕಟ್ಟು|ಹನುಮನ ಶರೀರದಾ ಹುಟ್ಟು||

  ಚಡ್ಡಿ ಚಿಲ್ಲಣ ತೊಟ್ಟು|ಥೈ ಥೈ ಕುಣಿವನು ಜಗಜಟ್ಟಿ ||
   
ಹನುಮ || ೧.



|| ಕರಿ ತುರಗಗಳೆಲ್ಲ|ಹನುಮಗೆ|ಶಸ್ತ್ರಾಸ್ತ್ರಗಳಿಲ್ಲಾ ||

ಬರಿ ಕೈಯೊಳಗೆಲ್ಲಾ ದನುಜರ ಕುಟ್ಟಿ ಬಿಸಾಟನಲ್ಲ ||

ಹನುಮ || ೨.



||ಮುಷ್ಠಿಯಿಂದಲೆ ಕುಟ್ಟಿ|ದೈತ್ಯರ|ಸೀಳಿದ ಜಗಜಟ್ಟಿ 

ಹಟ್ಟಿ ಮಲ್ಲರ ಮೆಟ್ಟಿ|ಥೈ ಥೈ ಕುಣಿದನು ಜಗಜಟ್ಟಿ||

ಹನುಮ || ೩.




|| ರಾವಣನಿಗೆ ಗೊತ್ತು | ಮಾರುತಿ ಪೆಟ್ಟಿನ ಆ ಗತ್ತು ||

ಅವನಿದ್ದರೆ ಇತ್ತು | ಚರಿತೆಯ ಕೇಳಬಹುದಲಿತ್ತು || ೪.




|| ರಾಮನ ದಾಸನವ|ಹನುಮನು|ತಾನೇ ಈಶನವ |

ಪ್ರೇಮ ಮಾರುತಿ || ಪರಮೇಶ ದಾಸರ |

ನೇಮದಿ ಸಲಹುವನು || ಹನುಮ || ೫.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು