Rama Bhajan -- Rama rama enniri song lyrics in kannada


Rama Bhajan -- Rama rama enniri song lyrics in kannada, belaguru bhajan lyrics, kannada bhajan lyrics
belaguru bhajan lyrics, kannada bhajan lyrics, rama rama enniri song lyrics in kannada


|| ಶ್ರೀರಾಮ ಸ್ತುತಿ ||

ರಾಗ :- ಮಧ್ಯಮಾವತಿ
ತಾಳ :- ಆದಿ


|| ರಾಮ ರಾಮ ರಾಮ ರಾಮ ರಾಮ ರಾಮ |
  ಕ್ಷೇಮವಿತ್ತು ಪೊರೆವ ರಾಮ ನಾಮವನ್ನು ಬಿಡದಿರಿ || ಪ || ರಾಮ ರಾಮ ||

1.  || ಜಾತಿ ವರ್ಣ ಕುಲಗಳೆಂಬ ಹೆಮ್ಮೆಯನ್ನು ಕಳೆಯಿರಿ ||
     ಪ್ರೀತಿಯಿಂದ ಎಲ್ಲರನ್ನು ಕಾಂಬೊದನ್ನ ಕಲಿಯಿರಿ ||
     ಮಾತು ಮಾತಿಗೊಮ್ಮೆ ರಾಮ ನಾಮ ಉಚ್ಛರಿಸಿರಿ || ರಾಮಾ ರಾಮಾ ||
     ಮಾತು ಮಾತಿಗೊಮ್ಮೆ ರಾಮ ನಾಮ ಉಚ್ಛರಿಸಿರಿ ||
     ಭೀತಿಯಿಲ್ಲ ಇನ್ನು ಮುಂದೆ | ಪೂತರಾದೆವೆನ್ನಿರಿ || ರಾಮ ರಾಮ ||

2. || ಧ್ಯಾನ ಮೌನವರಿಯದಿದ್ದರೇನು ಚಿಂತೆ ಪಡದಿರಿ |
    ನಾನು ನೀನು ಎಂಬ ಭೇದ ಬುದ್ಧಿಯನ್ನು ತೊಡೆಯಿರಿ ||
  || ದೀನ ಬಂಧು ರಾಮನವನ ನಾಮ ಉಚ್ಛರಿಸಿರಿ |ರಾಮಾ ರಾಮಾ ||
    ದೀನ ಬಂಧು ರಾಮನವನ ನಾಮ ಉಚ್ಛರಿಸಿರಿ |
    ಹಾನಿ ವೃದ್ಧಿ ಇಲ್ಲದಿರುವ ತಾಣವನ್ನೆ ಪಡೆಯಿರಿ || ರಾಮ ರಾಮ ||

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು