|| ಹನುಮ ಸ್ತುತಿ ||
ರಾಗ : ಯದುಕುಲ ಕಾಂಬೋಧಿ
ತಾಳ : ಆದಿ
|| ಹನುಮನ ಪ್ರಾಣ | ಪ್ರಭೋ ರಘುರಾಮ ||
ಇನಕುಲ ಸೋಮ |
ಕೋದಂಡ ರಾಮ || ಹನುಮನ ||
1. || ಧರಣೀ ಅಂಬರ || ದಿನಕರ ಚಂದಿರ |
ನಿನ್ನಯ ರೂಪವ ನೋಡಿ
ಸಾಗರದಲೆಗಳು | ಸಮೀರದೊಡನೆ |
ನಿನ್ನಯ ನಾಮವ ಪಾಡಿ |
ಪ್ರತೀ ಕಾಣದೆ | ಕಾಣುವಾ | ನೀನೆ ರಾಮ |
ಮಹಾ ಸಾಧನಾ ಮುಕ್ತಿಗೆ | ನಿನ್ನ ನಾಮ ||
|| ಹನುಮನ ||
2. || ಭಾನುಕುಲೇಶ | ಮಾನವ ವೇಷ |
ವಾನರ ಕುಲದಾ ಸ್ವಾಮಿ ||
ದೀನರ ದಾತ | ನೀನಿರುವಂಥ |
ಪಾವನ ಮಯವೀ | ಭೂಮಿ ||
ಹೇ ರಾಘವಾ | ಪಾವನಾ ನೀನೆ ರಾಮಾ ||
ಈ ಲೋಕದಾ |ಭಾಗ್ಯವೇ | ನೀನೇ ರಾಮಾ |
|| ಹನುಮನ ||
ಜಯ ಜಯ ರಾಂ | ಜಾನಕಿ ರಾಂ |
ಜಯ ಜಯ ರಾಂ | ಜಾನಕಿ ರಾಂ |
0 ಕಾಮೆಂಟ್‌ಗಳು