ರಾಮ ರಾಮ ಎನ್ನಿರೋ ಇಂಥ_ "Rama Rama Enniro" Bhajan

 || ರಾಮ ಸ್ತುತಿ ||

ರಾಗ : ಕಮಾಚ್

ತಾಳ : ಆದಿ



ಪ   || ರಾಮಾ ರಾಮಾ ಎನ್ನಿರೋ | ಇಂಥಾ |

ಸ್ವಾಮಿಯ ನಾಮವ | ಮರೆಯದಿರೋ ||

       ರಾಮಾ ರಾಮಾ ಎನ್ನಿರೋ ||


1. || ತುಂಬಿದ ಪಟ್ಟಣಕ್ಕೆ | ಒಂಬತ್ತು ಬಾಗಿಲು ||

  ಸಂಭ್ರಮದರಸುಗಳು | ಐದು ಮಂದಿ ||

  ಡಂಭಕತನದಿಂದ | ಕಾಯುವ ಜೀವನ |

ನಂಬಿ ನೆಚ್ಚಿ ನೀವು ಕೆಡಬೇಡಿರೋ

                                  || ರಾಮಾ ರಾಮಾ ||


2. || ನೆಲೆಯಿಲ್ಲದೀಕಾಯ | ಎಲುಬಿನ ಹಂದರ ||

  ಒಲಿದು ಸುತ್ತಿದ ಈ|ಚರ್ಮದ ಹೊದಿಕೆ ||

  ಮಲಮೂತ್ರಂಗಳ|ಕೀವು ಕ್ರಿಮಿಗಳ  ಚೆಲುವ

ದೇಹವ ನೆಚ್ಚಿ ಕೆಡಬೇಡಿರೋ ||

                                  || ರಾಮಾ ರಾಮಾ ||


3. || ಹರಬ್ರಹ್ಮ ಸುರರಿಂದ|ವಂದಿಪನಾಗಿರ್ಪ ||

   ಹರಿಯೇ ಸರ್ವೋತ್ತಮ|ಎಂದೆನ್ನಿರೋ ||

   ಪುರಂದರ ವಿಠಲನ|ಸ್ಮರಣೆಯ ಮಾಡಲು |

ದುರಿತಗಳೆಲ್ಲವ ಪರಿಹರಿಸೋ ||

                                  || ರಾಮಾ ರಾಮಾ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು