ಸ್ವಾಮಿ ಮುಖ್ಯಪ್ರಾಣ - Maruthi Bhajane -Swamy Mukhya Prana

॥ ಭಜನೆ ॥ 


ರಾಗ : ಮಧ್ಯಮಾವತಿ

ತಾಳ: ಆದಿ 


ಸ್ವಾಮಿ ಮುಖ್ಯಪ್ರಾಣ । ನಿನ್ನ ಮರೆವರ ಗಂಟಲ ಗಾಣ ಹಿಡಿದ್ಯೋ ರಾಮರ ಚರಣ ||ನೀ|ಹೌದೌದೋ ಜಗತ್ಪ್ರಾಣ||    ಸ್ವಾಮಿಮುಖ್ಯ ॥| 

ಸಂಜೀವನ ಪರ್ವತವ । ನೀ । ಅಂಜದೆ ತಂದ್ಯೋ  ದೇವಾ ॥ಅಂಜನಸುತ ಸದಾ ಕಾಯ್ವ । ಹೃತ್ಕಂಜವಾಸ ಸರ್ವಜೀವ ||     ಸ್ವಾಮಿಮುಖ್ಯ ॥          ೧. ॥

ಏಕಾದಶರ ರುದ್ರ| ನೀ । ಒಯ್ದ್ಯೋ ರಾಮರ ಮುದ್ರ ॥ ಸಕಲವಿದ್ಯ ಸಮುದ್ರ । ನೀ | ಹೌದೌದೋ ಬಲಭದ್ರ ॥ ಸ್ವಾಮಿಮುಖ್ಯ ॥                        ೨.

॥ ವೈಕುಂಠದಿಂದ ಬಂದು । ನೀ । ಪಂಪಾ ಕ್ಷೇತ್ರದಿ ನಿಂದು । ಯಂತ್ರೋಧಾರಕನೆಂದು । ಪುರಂದರ ವಿಠಲ ಸಲಹೆಂದು ॥ ಸ್ವಾಮಿ  ಮುಖ್ಯ ॥         ೩.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು