ನಟವರ ಗಂಗಾಧರ - Shiva Stuti - Belaguru Bhajan - Natavara Gangadhara


 || ಶಿವಸ್ತುತಿ ||

 ರಾಗ : ಹರಿ ಕಾಂಬೋದಿ

ತಾಳ : ಆದಿ

॥ ನಟವರ ಗಂಗಾಧರ । ಉಮಾಶಂಕರ ॥      

ಲೀಲಾ ವಿನೋದ ।ವಿಹಾರ......... ॥   || ಅ.ಪ ||       

 ನಟವರ ಗಂಗಾಧರ ||


॥ ಜನನ- ಮರಣೊಂದು ಚದುರಂಗವಾಗಿ ।

 ಜನರೇ ಹಾಯಾಗಿ । ನೀನೇ ಕಲಿಯಾಗಿ ।

          ನಗುವೇ.....ನೀನು...... ಹಾಯಾಗಿ....... ॥

ನಟವರ ಗಂಗಾಧರಾ ॥          ೧.


॥ ತೋರಿ ನಲಿವಿಂದ । ನೀ ಬಾಳಿನಂದ  ।

 ಭ್ರಮೆಯ ತುಂಬಿಡುವೆ । ಪ್ರಭುವೇ ಮುಂಬಿಡದೆ ॥

          ದಾರಿಯ..... ಕವಲು...... ಮಾಡಿರುವೆ..... ॥

ನಟವರ ಗಂಗಧರಾ ॥          ೨.


॥ ಜ್ಞಾನ ಗುಣ ಲೀಲಾ । ಕರುಣಾಲವಾಲ ॥

  ತಿಳಿಯೇ ನೀ  ಲೀಲಾ । ದೇವಗುಣ ಲೋಲಾ  ॥

            ಮಹಿಮಾ.... ಜನರೇ..... ಜಗಪಾಲ...... ॥

ನಟವರ ಗಂಗಾಧರಾ ॥        ೩.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು