|| ಶಾರದಾ ಸ್ತುತಿ ||
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೇ || ಪ ||
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಖ್ಯದಾತೆ ||ಅ. ಪ.||
ಆಂಧಕಾರವ ಓಡಿಸು ಜ್ಞಾನಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು ಶಾಂತಿಯ ಉಳಿಸು ॥1||
ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ ನಮ್ಮ ಕೋರಿಕೆ ಆಲಿಸಮ್ಮ ||2॥
ಒಳ್ಳೆ ಮಾತುಗಲಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯ ಕಲಿಸು ಆಸೆ ಪೂರೈಸು॥3॥
0 ಕಾಮೆಂಟ್‌ಗಳು