ಶ್ರೀ ಸತ್ಯನಾರಾಯಣಸ್ವಾಮಿ ವ್ರತ ಕಥೆ ಹಾಡಿನ ರೂಪದಲ್ಲಿ - Sri Satyanarayana Swamy Vratha Katha Lyrics

ಶ್ರೀ ಸತ್ಯನಾರಾಯಣಸ್ವಾಮಿ ವ್ರತ ಕಥೆ 


kannadabhajanlyrics.com
kannadabhajanlyrics.com


ಯಾರು ಈ ಸತ್ಯನಾರಾಯಣ ವ್ರತವನ್ನು ದಿನವೂ ಶ್ರವಣ ಮಾಡುತ್ತಾರೊ ಅಥವಾ ಪಠನ ಮಾಡುತ್ತಾರೋ ಅವರ ಸಮಸ್ತವಾದ ದುಃಖವೂ ಸತ್ಯನಾರಾಯಣ ದೇವರ ಪ್ರಸಾದದಿಂದ ನಾಶಹೊಂದುವಂಥದ್ದಾಗಿ ಸುಖದಿಂದ ಇರುವಂಹವರಾಗುತ್ತಾರೆಂಬುದರಲ್ಲಿ ಸಂಶವಿಲ್ಲ 



 ಜಯ  ಸತ್ಯನಾರಾಯಣ ಜಯ ಸತ್ಯ ಭಾಮೇಶ 

ಜಯಸತ್ಯ ಗಣಪತಿಯೆ ಜಯತು ಜಯತು

ನೈಮಿಷಾರಣ್ಯದಲ್ಲಿ ಶೌನಕಾದಿಲ್ಲಿಲ್ಲೊಮ್ಮೆ 

ಪ್ರೇಮದಿಂ ಸೂತರನು ಕೇಳಲಾಗ

ಭೂಮಿಯಲ್ಲಿ ಬಳಲುತಿಹ ಕಲಿಯುಗದ ಜನಗಳಿಗೆ

ಕಾಮಿತವನೀವೊಂದು ವ್ರತವ ಪೇಳಿದರು 


ವ್ರತವಿಹುದು ಸತ್ಯನಾರಾಯಣನ ಪೂಜೆಯಿದು

ಸತತ ಕಷ್ಟವನೆಲ್ಲಾ ಪರಿಹರಿಸುವುದು.

ಕಂತುಪಿತ ನಾರದಗೆ ,ಪೇಳಿದನು ಮೊದಲಿದನು

ಇಂತಿಸಿದ ಫಲಗಳನು ಕೊಡುವುದಿದುವೆ. 


ಭಕ್ತಿಯಿಂದರ್ಚಿಸುತೆ ನಿಯಮದುದ್ಯಾಪನೆಯ ಮಾಡಿ,

ಮುಕ್ತಿಯನು ಸುಲಭದಲೆ ಪಡೆಯಬಹುದು.

ವಿಪ್ರನೋರ್ವನು ಭಿಕ್ಷೆಯಿಂದ ಜೀವಿಸುತಿರಲು,

ವಿಪ್ರವೇಶದಿ ಬಂದು ಕಾರುಣ್ಯ ಸಿಂಧು.

ಅಪ್ರಮೇಯನು ಪೇಳಲೀವ್ರತವನಾಚರಿಸಿ

ಕ್ಷಿಪ್ರದಲಿ ಸಂಪದವ ಪಡೆದನೆಂದು 


ವಿಪ್ರನೀಪರಿಯಲ್ಲಿ ವ್ರತವನಾಚರಿಸುತಿರೆ ಕಾಷ್ಠ

ವಿಕ್ರಯಿಯೋರ್ವ ನೀರಡಿಸಿ ಬಂದು

ಹೊತ್ತ ಸೌದೆಯ ಹೊರೆಯನಿಳುಹಿ ಪೂಜೆಯ ಕಂಡು

ವಿಧಿಯನೆಲ್ಲವ ಕೇಳ್ದ ತಾ ಮಾಡಲೆಂದು


ಸಂಕಲ್ಪವಂ ಮಾಡಿ ಕಟ್ಟಿಗೆಯ ಮಾರುತಲಿ

ದ್ವಿಗುಣ ಧನವನು ಪಡೆದು ಭಕ್ತಿಯಿಂದ

ಸತ್ಯನಾರಾಯಣನ ಪೂಜಿಸುತಲಿಹಪರದ

ಸಕಲ ಸೌಖ್ಯಗಳನ್ನು ಪಡೆದನಾಗ 


ರಾಜನುಲ್ಕಾಮುಖನು ಸಂತತಿಯ ಬಯಸುತಲಿ

ವ್ರತವನಾಚರಿಸುತಿರೆ ವರ್ತಕನು ಕಂಡು

ಮಕ್ಕಳಾದರೆ ತಾನು ವ್ರತದ ಮಾಡುವೆನೆಂದು

ಹರಕೆಯನು ಹೊತ್ತನಾ ಶೆಟ್ಟಿ ಮನದೊಳಗೆ 


ಸತಿಯು ಲೀಲಾವತಿಯು ಗರ್ಭವನ್ನು ತಳೆದಳೈ

ಸತ್ಯನಾರಾಯಣನ ಕರುಣೆಯಿಂದ

ಕನ್ಯೆಯನ್ನು ಪಡೆದಳಾ ಶಿಶುಕಲಾವತಿಯೆಂದು 

ಶುಕ್ಲ ಶಶಿಯಂದದಲಿ ಬೆಳೆದಳಾಗ 


ವರ್ಷ ತುಂಬಲಿಯೆಂದು

ಮದುವೆ ಸಮಯದೊಳೆಂದು 

ವ್ರತವ ಮುಂದೂಡುತಲಿ ಮರೆತನಾಗ

ಸತ್ಯದೇವನು ತಾನು ಧನಮದವನಿಳಿಸಲ್ಕೆ

ಶಪಿಸಿದನು ದಾರುಣದ ಕಷ್ಟ ಬರಲೆಂದು


ವಾಣಿಜ್ಯ ವೃತ್ತಿಯಿಂದ ರತ್ನಸಾರಪುರಕ್ಕೆ

ಅಳಿಯನೊಂದಿಗೆ ತೆರಳಿ ದುಡಿಯುತಿರಲು

ನೃಪಚಂದ್ರ ಕೇತುವಿನ ಧನವ ಚೋರನು ಕದ್ದು

ತಂದಿವರ ಬಳಿಯಿರಿಸಿ ಕಾಣದಾದ 


ರಾಜದೂತರು ಬಂದು ಬಂಧಿಸಿದರೀರ್ವರನು

ದೇವಮಾಯೆಯೊಳವರ ಮಾತನಾಲಿಸದೆ

ಸೆರೆಯೊಳಿಟ್ಟರು, ಸಕಲ ಧನಕನಕ ವಸ್ತುಗಳ

ಬೊಕ್ಕಸಕ್ಕೆ ಸುರಿದಿರಲೆ ಲೆಕ್ಕವಿಲ್ಲದೆ


ಇತ್ತ ಲೀಲಾವತಿಯು ಮನೆಗೆ ಕಳ್ಳರು ಹೊಕ್ಕು

ವಿತ್ತವನ್ನಪಹರಿಸೆ ತಿರಿದು ತಿನ್ನುತಲಿ

ಬಳಲುತಿರೆ ಮಗಳೊಮ್ಮೆ ತಾ ಕಂಡ ಪೂಜೆಯನು

ವಿವರಿಸಲು ನೆನೆದಳೈ  ವ್ರತವ ಬಿಟ್ಟುದನು |


ತಾಯಿ ಮಗಳಿಬ್ಬರೂ ಭಕ್ತಿಯಿಂ ಪೂಜಿಸುತೆ

ತಮ್ಮ ಯಪರಾಧಗಳ ಮನ್ನಿಪುದು ಎಂದು

ತಮ್ಮ ಪತಿಗಳು ಬರಲು ವ್ರತವ ಮಾಡುವೆವೆಂದು

ಬೇಡೆ ದಯದೋರಿದನು ಕಾರುಣ್ಯ ಸಿಂಧು


ಅತ್ತ ಸೆರೆಯೊಳಗಿಟ್ಟ ಬಂದಿಗಳನೀರ್ವರನು

ಬಿಡುತವರ ಧನವ ಕೊಡುಯೆಂದು ಕನಸಿನಲಿ 

ಪ್ರಭು ಪೇಳೆ ನೃಪ ಬೆದರಿ ಲೆಕ್ಕವಿರದಿರಲ್ಕೆ 

ಒಂದಕ್ಕೆ ಹತ್ತಾಗಿ ಕೊಟ್ಟು ಕಳುಹಿಸಿದನು 


ದಂಡಿವೇಷದಿ ಬಂದು ಪರಿಕಿಸಲು ನಾವೆಯೊಳು

ಸೊಪ್ಪು ಸದೆಯಿಹುದೆಂಬುದೇ ಸತ್ಯವಾಯ್ತು 

ಕ್ಷಮೆಯ ಬೇಡಲು ಬಳಿಕ ಕೊಟ್ಟನೆಲ್ಲವ ತಿರುಗಿ

ಊರು ಕಾಣಲು ಮನೆಗೆ ಹೇಳಿ ಕಳುಹಿಸಿದರು


ಪತಿಗಳೈತಂದರೆಂದುದ ಕೇಳಿ ಸಂಭ್ರಮದಿ

ತಾಯಿ ಹೊರಡಲು ಮಗಳು ಪೂಜೆ ಮುಗಿಸಿ

ದೇವಪ್ರಸಾದವನು ಮರೆಯುತೋಡುತ ನೋಡೆ

ಪತಿಯು ನಾವೆಯ ಸಹಿತ ಕಾಣದಾದನಹೋ


ಗೋಳಿಟ್ಟು ದೇವನನು ಮರೆಹೋಗಲು

ಬಾನ್ನುಡಿಯ ಕೇಳಿ ಪ್ರಸಾದವನು ಭುಜಿಸಿ ಬರಲು

ತೇಲಿತಾ ನಾವೆಯದು ಪತಿಯೊಡನೆ ಭಕ್ತಿಯಲಿ

ಆಚರಿಸಿ ವ್ರತವನು ಸಕಲ ಸುಖವ ಹೊಂದಿದರು 


ರಾಜನಂಗಧ್ವಜನು ಬೇಟೆಯಾಡುತ ಬಂದು 

ಗೊಲ್ಲರಾಚರಿಸುತಿಹ ವ್ರತವ ಕಂಡು 

ಗರ್ವದಿಂ ತೃಜಿಸುತ್ತೆ ದೇವಪ್ರಸಾದವನು |

ಕಳೆದುಕೊಂಡನು ಸಕಲ ಸಿರಿಯ ಸುತರೊಡನೆ


ಮದವಳಿಯೆ ಗೊಲ್ಲರೆಡೆಗೈ ತಂದು ಭಕ್ತಿಯಲಿ

ವ್ರತವ ಮಾಡುತೆ ಗೋಪಾಲ ಬಾಲರೊಡನೆ

ಸುತರೊಡನೆ ಸಿರಿಯ ತಾ ತಿರುಗಿ ಪಡೆದನು ಜಗದಿ 

ಸತ್ಯದೇವನ ಮಹಿಮೆ ಪೇಳಲಸದಳವು 


 ಸತ್ಯನಾರಾಯಣನೇ ಸತ್ಯ ಬಾ ಮಾಧವನೆ

 ಸತ್ಯಗಣಪತಿ ರೂಪ ಸತ್ಯನಾಥ ಸತ್ಯಮಂಗಳ

 ನಿತ್ಯವೀ ಚಿದಂಬರ ವಿನುತಾ ಸತ್ಯನಿಧಿ ಸತ್ಯೇಶ

  ಶುಭ ಮಂಗಳಂ 

 

|| ಶ್ರೀ ಕೃಷ್ಣಾರ್ಪಣಮಸ್ತು ॥| 






ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)