ಶುದ್ಧಬ್ರಹ್ಮ ಪರಾತ್ಪರ ರಾಮ - Shuddha Brahma Paratpara Rama

 ಓಂ ಶ್ರೀ - ಸೀತಾ - ಲಕ್ಷ್ಮಣ - ಭರತ - ಶತೃಘ್ನ - ಹನುಮತ್ ಸಮೇತ ಶ್ರೀ ರಾಮಚಂದ್ರ ಪರಬ್ರಹ್ಮಣೇ ನಮಃ | 

kannadabhajanlyrics.com
 kannadabhajanlyrics.com 


|| ಬಾಲ ಕಾಂಡ ||

ಶುದ್ಧ ಬ್ರಹ್ಮ ಪರಾತ್ಪರ ರಾಮ 

ಕಾಲಾತ್ಮಕ ಪರಮೇಶ್ವರ ರಾಮ 

ಶೇಷತಲ್ಪ ಸುಖ ನಿದ್ರಿತ ರಾಮ 

ಬ್ರಹ್ಮಾದ್ಯಮರ ಪ್ರಾರ್ಥಿತ ರಾಮ 

|| ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತಾರಾಮ ||


ಚಂಡ ಕಿರಣ ಕುಲ ಮಂಡನ ರಾಮ 

ಶ್ರೀಮದ್ದಶರಥ ನಂದನ

ಕೌಸಲ್ಯಾ ಸುಖ ವರ್ಧನ ರಾಮ 

ವಿಶ್ವಾಮಿತ್ರ ಪ್ರಿಯಧನ ರಾಮ || ರಾಮ ರಾಮ ||


ಘೋರ ತಾಟಕಾ ಘಾತಕ ರಾಮ 

ಮಾರೀಚಾದಿ ನಿಪಾತಕ ರಾಮ 

ಕೌಶಿಕ ಮಖ ಸಂರಕ್ಷಕ ರಾಮ 

ಶ್ರೀಮದಹಲ್ಯೋದ್ಧಾರಕ ರಾಮ || ರಾಮ ರಾಮ ||


ಗೌತಮ ಮುನಿ ಸಂಪೂಜಿತ ರಾಮ 

ಸುರಮುನಿ ವರಗಣ ಸಂಸ್ತುತ ರಾಮ 

ನಾವಿಕ ಧಾವಿತ ಮೃದುಪದ ರಾಮ 

ಮಿಥಿಲಾ ಪುರಜನ ಮೋಹಕ ರಾಮ ||ರಾಮ ರಾಮ||


ವಿದೇಹ ಮಾನಸ ರಂಜಕ ರಾಮ 

ತ್ರ್ಯಂಬಕ ಕಾರ್ಮುಕ ಭಂಜಕ ರಾಮ 

ಸೀತಾರ್ಪಿತ ವರ ಮಾಲಿಕ ರಾಮ 

ಕೃತ ವೈವಾಹಿಕ ಕೌತುಕ ರಾಮ || ರಾಮ ರಾಮ ||


ಭಾರ್ಗವ ದರ್ಪ ವಿನಾಶಕ ರಾಮ 

ಶ್ರೀಮದಯೋಧ್ಯಾ ಪಾಲಕ ರಾಮ 

|| ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತಾರಾಮ ||


|| ಅಯೋಧ್ಯಾ ಕಾಂಡ ||i

ಅಗಣಿತ ಗುಣಗಣ ಭೂಷಿತ ರಾಮ 

ಅವನೀ ತನಯಾ ಕಾಮಿತ ರಾಮ 

ರಾಕಾ ಚಂದ್ರ ಸಮಾನನ ರಾಮ 

ಪಿತೃ ವಾಕ್ಯಾಶ್ರಿತ ಕಾನನ ರಾಮ || ರಾಮ ರಾಮ ||


ಪ್ರಿಯಗುಹ ವಿನಿವೇದಿತ ಪದ ರಾಮ 

ತತ್‌ಕ್ಷೌಳಿತ ನಿಜ ಮೃದುಪದ ರಾಮ 

ಭರದ್ವಾಜ ಮುಖಾ ನಂದಕ ರಾಮ 

ಚಿತ್ರಕೂಟಾದ್ರಿ ನಿಕೇತನ ರಾಮ  || ರಾಮ ರಾಮ ||


ದಶರಥ ಸಂತತ ಚಿಂತಿತ ರಾಮ 

ಕೈಕೇಯೀ ತನಯಾರ್ಥಿತ ರಾಮ 

ವಿರಚಿತ ನಿಜಪಿತೃ ಕರ್ಮಕ ರಾಮ 

ಭರತಾರ್ಪಿತ ನಿಜ ಪಾದುಕ ರಾಮ 

|| ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತಾರಾಮ ||


|| ಅರಣ್ಯ ಕಾಂಡ ||

ದಂಡಕ ವನಜನ ಪಾವನ ರಾಮ 

ದುಷ್ಪ ವಿರಾಧ ವಿನಾಶನ ರಾಮ 

ಶರಭಂಗ ಸುತೀಕ್ಷ್ಣಾರ್ಚಿತ ರಾಮ 

ಅಗಸ್ತ್ಯಾನುಗ್ರಹ ವರ್ಧಿತ ರಾಮ || ರಾಮ ರಾಮ ||


ಗೃಧ್ರಾಧಿಪ ಸಂಸೇವಿತ ರಾಮ 

ಪಂಚವಟೀ ತಟ ಸುಸ್ಥಿತ ರಾಮ || ರಾಮ ರಾಮ ||


ಶೂರ್ಪಣ ಖಾರ್ತಿ ವಿಧಾಯಕ ರಾಮ 

ಖರದೂಷಣ ಮುಖ ಭಂಜಕ ರಾಮ||ರಾಮ ರಾಮ||


ಸೀತಾಪ್ರಿಯ ಹರಿಣಾನುಗ ರಾಮ 

ಮಾರೀಚಾರ್ತಿ ಕೃದಾಶುಗ ರಾಮ  

ವಿನಿಷ್ಟ ಸೀತಾನ್ವೇಷಕ ರಾಮ 

ಗೃಧ್ರಾಧಿಪ ಗತಿದಾಯಕ ರಾಮ || ರಾಮ ರಾಮ ||


ಶಬರೀ ದತ್ತ ಫಲಾಶನ ರಾಮ 

ಕಬಂಧ ಬಾಹುಜ್ಬೇದನ ರಾಮ 

|| ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತಾರಾಮ ||


|| ಕಿಷ್ಕಿಂಧಾ ಕಾಂಡ ||

ಹನುಮತ್ಸೇವಿತ ನಿಜಪದ ರಾಮ 

ನತಸುಗ್ರೀವಾ ಭೀಷ್ಟದ ರಾಮ 

ಗರ್ವಿತ ವಾಲಿ ಸಂಹಾರಕ ರಾಮ 

ವಾನರದೂತ ಪ್ರೇಷಕ ರಾಮ || ರಾಮ ರಾಮ ||


ಹಿತಕರ ಲಕ್ಷ್ಮಣ ಸಂಯುತ ರಾಮ 

|| ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತಾರಾಮ ||


|| ಸುಂದರ ಕಾಂಡ ||

ಕಪಿವರ ಸಂತತ ಸಂಸ್ಕತ ರಾಮ 

ತದ್ಗತಿ ವಿಘ್ನ ಧ್ವಂಸಕ ರಾಮ 

ಸೀತಾ ಪ್ರಾಣಾಧಾರಕ ರಾಮ 

ದುಷ್ಪ ದಶಾನನ ದೂಷಿತ ರಾಮ||ರಾಮ ರಾಮ||


ಶಿಷ್ಪ ಹನೂಮದ್ಭೂಷಿತ ರಾಮ

ಸೀತಾ ವೇದಿತ ಕಾವನ ರಾಮ 

ಕೃತ ಚೂಡಾಮಣಿ ದರ್ಶನ ರಾಮ 

ಕಪಿವರ ವಚನಾ ಶ್ವಾಸಿತ ರಾಮ 

|| ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತಾರಾಮ ||


|| ಯುದ್ಧ ಕಾಂಡ ||

ರಾವಣ ನಿಧನ ಪ್ರಸ್ಥಿತ ರಾಮ 

ವಾನರಸೈನ್ಯ ಸಮಾವೃತ ರಾಮ 

ಶೋಷಿತ ಶರಧೀ ಚಾರ್ಥಿತ ರಾಮ 

ವಿಭೀಷಣಾ ಭಯ ದಾಯಕ ರಾಮ 

ಪರ್ವತಸೇತು ನಿಬಂಧಕ ರಾಮ 

ಕುಂಭಕರ್ಣ ಶಿರಶ್ಚೇದಕ ರಾಮ 

ರಾಕ್ಷಸ ಸಂಘ ವಿಮರ್ದಕ ರಾಮ 

ಅಹಿಮಹಿ ರಾವಣ ಚಾರಣ ರಾಮ||ರಾಮ ರಾಮ||


ಸಂಹೃತ ದಶಮುಖ ರಾವಣ ರಾಮ 

ವಿಧಿಭವ ಮುಖಸುರ ಸಂಸ್ತುತ ರಾಮ 

ಖಸ್ಥಿತ ದಶರಥ ವೀಕ್ಷಿತ ರಾಮ 

ಸೀತಾ ದರ್ಶನ ಮೋದಿತ ರಾಮ || ರಾಮ ರಾಮ ||


ಅಭಿಷಿಕ್ತ ವಿಭೀಷಣ ನುತ ರಾಮ 

ಪುಷ್ಪಕ ಯಾನಾ ರೋಹಣ ರಾಮ 

ಭರದ್ವಾಜಾಭಿ ನಿಷೇವಣ ರಾಮ 

ಭರತಪ್ರಾಣಪ್ರಿಯಕರ || ರಾಮ ರಾಮ ||


ಸಾಕೇತ ಪುರೀ ಭೂಷಣ ರಾಮ 

ಸಕಲಸ್ವೀಯಸ ಮಾನಸ ರಾಮ 

ರತ್ನಲಸತ್ಪೀಠ ಸ್ಥಿತ ರಾಮ 

ಪಟ್ಟಾಭಿಷೇಕಾಲಂಕೃತ ರಾಮ || ರಾಮ ರಾಮ ||


ಪಾರ್ಥಿವ ಕುಲ ಸನ್ಮಾನಿತ ರಾಮ 

ವಿಭೀಷಣಾರ್ಪಿತ ರಂಗಕ ರಾಮ 

ಕೀಶ ಕುಲಾನುಗ್ರಹಕರ ರಾಮ 

ಸಕಲ ಜೀವ ಸಂರಕ್ಷಕ ರಾಮ 

ಸಮಸ್ತ ಲೋಕಾದ್ಧಾರಕ ರಾಮ 

|| ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತಾರಾಮ ||



ಅಗಣಿತ ಮುನಿಗಣ ಸಂಸ್ತುತ ರಾಮ 

ವಿಶ್ರುತ ದಶಕಂಠೋದ್ಭವ ರಾಮ 

ಸೀತಾಲಿಂಗನ ನಿರ್ವೃತ ರಾಮ 

ನೀತಿ ಸುರಕ್ಷಿತ ಜನಪದ ರಾಮ 

ವಿಪಿನತ್ಯಾಜಿತ ಜನಕಜ ರಾಮ 

ಕಾರಿತ ಲವಣಾಸುರ ವಧ ರಾಮ 


ಸ್ವರ್ಗತ ಶಂಬೂಕ ಸಂಸ್ತುತ ರಾಮ 

ಸ್ವತನಯ ಕುಶಲವ ನಂದಿತ ರಾಮ 

ಅಶ್ಚಮೇಧ ಕ್ರತು ದೀಕ್ಷಿತ ರಾಮ 

ಕಾಲಾವೇದಿತ ಸುರಪದ ರಾಮ 

ಆಯೋಧ್ಯಕ ಜನ ಮುಕ್ತಿದ ರಾಮ 

ವಿಧಿಮುಖ ವಿಬುಧಾನಂದಕ ರಾಮ 


ತೇಜೋಮಯ ನಿಜ ರೂಪಕ ರಾಮ 

ಸಂಸ್ಕೃತಿ ಬಂಧ ವಿಮೋಚಕ ರಾಮ 

ಧರ್ಮ ಸ್ಥಾಪನ ತತ್ಪರ ರಾಮ 

ಭಕ್ತಿ ಪರಾಯಣ ಮುಕ್ತಿದ ರಾಮ 

ಸರ್ವ ಚರಾಚರ ಪಾಲಕ ರಾಮ 

ಸರ್ವ ಭವಾ ಮಯ ವಾರಕ ರಾಮ 


ವೈಕುಂಠಾಲಯ ಸಂಸ್ಥಿತ ರಾಮ 

ನಿತ್ಯಾನಂದ ಪದಸ್ಥಿತ  ರಾಮ 

ರಾಮ ರಾಮ ಜಯ ರಾಜಾ ರಾಮ

ರಾಮ ರಾಮ ಜಯ ಸೀತಾ ರಾಮ 


ಭಯಹರ ಮಂಗಲ ದಶರಥ ರಾಮ 

ಜಯ ಜಯ ಮಂಗಲ ಸೀತಾ ರಾಮ 

ಮಂಗಲಕರ ಜಯ ಮಂಗಲ ರಾಮ 

ಸಂಗತ ಶುಭ ವಿಭವೋದಯ  ರಾಮ 


ಆನಂದಾಮೃತ ವರ್ಷಕ ರಾಮ 

ಆಶ್ರಿತ ವತ್ಸಲ ಜಯ ಜಯ ರಾಮ 

ರಘುಪತಿ ರಾಘವ ರಾಜಾ ರಾಮ 

ಪತಿತ ಪಾವನ ಸೀತಾ ರಾಮ 

| ರಾಮ ರಾಮ ಜಯ ರಾಜಾರಾಮ

ರಾಮ ರಾಮ ಜಯ ಸೀತಾರಾಮ ||
















ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)