|| ಭಕ್ತಿ ವೈರಾಗ್ಯ ಪ್ರಕರಣಂ ||
kannadabhajanlyrics.blogspot.com |
ಇನ್ನಾದರೀ ಜನ್ಮಕೇ ಬೇಸರಿಕೇ ನಿನ್ನೊಳಗೆ ತೋರದೇಕೆ।
ನಿನ್ನ ಮಾನಸದ ಬಯಕೇ ಎಲೆ ಜೀವ
ಶೂನ್ಯಮಾಗದು ಯಾತಕೆ ॥ಪಲ್ಲವಿ॥
ಪಡೆಯದಿಹ ಪದವಿಯಿಲ್ಲಾ
ನೀನಿನ್ನು ನುಡಿಯದಿಹ ನುಡಿಗಳಿಲ್ಲಾ |
ಕೊಡದಿರುವ ದಾನವಿಲ್ಲಾ |
ನೋಡದಿಹ ಬೆಡಗು ಬೇರೊಂದದಿಲ್ಲಾ ||೧||
ಕೂಡದಿಹ ಕುಲವರಿಲ್ಲಾ। ಕಣ್ಣಿನಿಂ ನೋಡದಿಹ।
ನೋಟವಿಲ್ಲಾ। ಆಡದಿಹ ಆಟವಿಲ್ಲಾ।
ನೀ ಬಿಡದೆ ಮಾಡದಿಹ ಪಾಪವಿಲ್ಲಾ ||೨||
ಹೊಂದದಿಹ ನರಕವಿಲ್ಲಾ।
ಯಮ ನಿನ್ನ ಬಂಧಿಸದ ಪಾಶವಿಲ್ಲಾ |
ವಂದಿಸದ ದೈವವಿಲ್ಲಾ|
ನೀನರಿಯದಂದಚಂದಂಗಳಿಲ್ಲಾ||೩||
ತಿಳಿಯದಿಹ ವಸ್ತುವಿಲ್ಲಾ |
ಅನುಭವಿಸದಿರುವ ವಿಷಯಂಗಳಿಲ್ಲಾ |
ಅರಿಯದಿಹ ತತ್ತ್ವವಿಲ್ಲಾ |
ನೀನೋದದಿರುವ ವಿದ್ಯೆಗಳೆ ಇಲ್ಲ ||೪||
ಪಠಿಸದಿಹ ಮಂತ್ರಿವಿಲ್ಲಾ |
ಸಾಧಿಸದ ಚಟುಲ ತಂತ್ರಗಳಿಲ್ಲಾ।
ನಟಿಸದಿಹ ನಡತೆಯಿಲ್ಲಾ |
ತೋರಿಸದ ಪಟುಮಹಾಮಹಿಮೆಯಿಲ್ಲಾ || ೫ ||
ವಿರಚಿಸದ ಕರ್ಮವಿಲ್ಲಾ |
ನೀ ಹೊಂದದಿರುವ ಯೋನಿಗಳೆ ಇಲ್ಲಾ
ತಿರುಗದಿಹ ಲೋಕವಿಲ್ಲಾ।
ನಿನ್ನ ಸುಡದಿರುವ ಸುಡುಗಾಡೇ ಇಲ್ಲ ||೬||
ನೋಡಿದುದನೇ ನೋಡುವೆ |
ತಿಂದು ತೇಗಾಡಿದುದನೇ ತಿನ್ನುವೇ।
ಬೇಡಿದುದನೇ ಬೇಡುವೆ |
ಹಿಂದೆ ನೀನಾಡಿದುದನೇ ಆಡುವೇ ||೭||
ಇನ ಗಿರಿಯೊಳೊಂದನಿಟ್ಟು |
ಅಸ್ತಗಿರಿತನಕ ಸೊನ್ಮೆಗಳನಿಟ್ಟು |
ಗಣಿಸಲಾ ಲೆಕ್ಕದಷ್ಟು |
ತನುಗಳೊಳು ಜನಿಸಿ ನೀ ಕಷ್ಟಪಟ್ಟು || ೮ ||
ತನುವ ಬೇರಿರಿಸಲಿಲ್ಲಾ |
ನಿನ್ನ ನಿಜವನು ನೀನು ಕಾಣಲಿಲ್ಲ |
ಜನನವನು ಹರಿಸಲಿಲ್ಲಾ |
ಗುರುಶಂಕರನ ಪದದಿ ನೀ ಬೆರೆಯಲಿಲ್ಲಾ ||೯||
॥ಇನ್ನಾದರೀ ಜನ್ಮಕೇ।|
0 ಕಾಮೆಂಟ್‌ಗಳು