ಭಕ್ತಿ ವೈರಾಗ್ಯ ಪ್ರಕರಣ - ಯಾವ ಲೋಕದ ಭಕ್ತಿಯೋ ಇದಾವಲೋಕದ ಮುಕ್ತಿಯೋ

|| ಭಕ್ತಿ ವೈರಾಗ್ಯ ಪ್ರಕರಣ ||

kannadabhajanlyrics.blogspot.com
kannadabhajanlyrics.blogspot.com


ಯಾವ ಲೋಕದ ಭಕ್ತಿಯೋ।|

ಇದಾವಲೋಕದ ಮುಕ್ತಿಯೋ

ಭಾವದೊಳು ಪರಿಶುದ್ಧವಿಲ್ಲದಿದ್ಯಾವ

ಪರಿಯ ವಿರಕ್ತಿಯೋ || ಪಲ್ಲವಿ॥


ರೋಗ ಬಂದರೆ ಸತಿಗೆ ವೈದ್ಯರಿಗಾಗಿ

ಧನವನು ಸುರಿಸುವೇ।

ಯೋಗಿ ಸೇವೆಗೆ ಎನಲು ಶಿರವನು

ಬಾಗಿ ಭೂಮಿಗೆ ಕೊರಗುವೇ।

ಭೋಗಿಸಲು ವಿಷಯವನು।

ಹಂದಿಯ ಜೋಗಿಯಂದದಿ ತಿರುಗುವೇ।

ನಾಗಶಯನನ ಗುಡಿಗೆ

ಬಾರೆನಲಾಗುತಿರಲದು ಎನ್ನುವೇ ||೧|| 


ಬಾಲ ತರುಣಿಯ ಕೇಳಿಗಾದರೆ|

ಲೀಲೆಯಿಂದೊಡ್ಯಾಡುವೆ|

ಕಾಲ ಕಂಠನ ಗುಡಿಗೆ ಬಾರೆನೆ।

ಕಾಲು ಉಳುಕಿದೆ ಎನ್ನುವೇ।

ಸೂಳೆಯರ ಕುಣಿದಾಟಕಾದರೆ।

ಶಾಲು ಜೋಡಿಯ ಹೊದಿಸುವೆ।

ಪಾಲನಯನನ ಸೇವೆಗೆಂದರೆ

ನಾಳೆ ಬಾರೆಂದುಸುರುವೆ || ೨ ||


ಹಾದಿಬೀದಿಯ ಕಾಡು ಸುದ್ದಿಯೊಳಾದರದಿ

ನೀ ಕೂಡುವೇ।

ವೇದ ವಾಕ್ಕವ ಪೇಳೆ।

ಹೊಟ್ಟೆಯ ಸಾಧನೆಗಳೆಂದಾಡುವೆ।

ಬಾಧೆಸುತನಿಗೆ ತೋರಿದರೆ 

ಹೊಲೆಮಾದಿಗರ ಕಾಲ್ಕಟ್ಟುವೇ।

ಸಾಧುಸೇವೆಗೆ ಕರದೊಡಿಲ್ಲದ।

ವಾದ ಮಾಡುತ ಮಲಗುವೇ ||೩||


ನೋಡಿ ವಿಷಯದ।

ರೂಢಿ ಸುಖವನು ಕೂಡಿ |

ಭೇದವ ತೊಟ್ಟರೈ

ನಾಡೆ ಕರ್ಮದಿ ಕೂಡಿ ದುಃಖದ।

 ಕಾಡಿನೊಳು ಕಾಲಿಟ್ಟರೈ |

ಕೇಡು ತೋರದ ರೂಢಮಾದಾ

ರೂಢ ಮಾರ್ಗವ ಬಿಟ್ಟರೈ

ಮೂಢ ಮನುಜರು ಮಾಡಿ 

ಪೂಜೆಯ ಬೇಡಿ ಫಲಗಳ ಕೆಟ್ಟರೈ 


ಧಾರಿಣಿಯ ಸುಖಕ್ಕಾಗಿ ಲಜ್ಜೆಯ

ತೊರೆದು ನೀಚರಿಗೆರಗುವೇ।

ಬಾರಿ ಬಾರಿಗು ಭಕ್ತಿಯಿಂದವ |

ರಿರುವ ಠಾವಿಗೆ ತಿರುಗುವೇ।

ಮೀರಿ ಹೂ೦ಕರಿಸಿದರು |

ಧರೆಯೊಳಗುರುಳಿ ದುಃಖಿಸಿ ಕೊರಗುವೇ।

ವೀರ ಗುರುಶಂಕರನ ಭಜಿಸೆನೆ | 

ಬರಿದೆ ನಿದ್ರೆಯೊಳೊರಗುವೆ ॥ಯಾವ। ೫ 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು