|| ಶ್ರೀಧರ ಭಜನೆ ||
ರಾಗ : ಭೈರವಿ
ತಾಳ : ಏಕಕಾಳ
ಹೇ ತಪೋಧನ ಶ್ರೀಧರ ಮುನಿ ನೀಡು ದರುಶನ ।
ಮಾತು ಮಾತಿಗು ನಿನ್ನ ಮಧುರ ನಾಮ
ನಾಲಿಗೆಯಲಿ ಬರಲಿ ಅನುದಿನ ॥ ಪ ॥
ಕಮಲ ಉದರದಿ ಅವತರಿಸಿದೆ |
ಲಾಡ್ ಬಾಜೊಳಿಲಿ |
ಸುಮನ ಸುಂದರ ಚರಿತೆನಾಯಕ ।
ನಾರಾಯಣಸುತ ನರವೇಷ ಧಾರಕ ॥ ೧॥
ಲೋಕ ವಂದ್ಯನೆ ಶ್ರೀಧರ ನೀ
ಕೃಪಾ ಸಮುದ್ರನೆ ಕಾಕು ಭವವ
ನೂಕಿನಲಿವ ಏಕದಂತನಪ್ರಿಯ ದೋಷ ನಾಷಕ ॥೨ ॥
ಜಿನ ಸಖ ನಿರುಪಮ ರುಚಿ ವಾಣಿ ಚಿರಸುಖ |
ಚಾರು ಚರಿತ ಭೀರು ಲಲಿತ ನಾರಾಯಣ
ಸುತ ಧೇನು ಪಾಲಾಕ್ಷ ||೩॥
ಮೌನಿ ವಂದ್ಯನೆ ಕಾಮಿತ ಫಲ ದಾನ ಶೀಲನೆ
ದೀನ ದುರಿತ ದಾನವಾರಿಸಿ
ಗಾನ ಕೋಮಲ ಶ್ರೀ ರಾಗ ಲೋಲನೆ ॥೪ ॥
ವಿಜಯ ಮಾಲಿಕಾ ಅಜ ಹರಿ ಹರ
ಪದ ವಿರಾಜಿತ ನಿಜ ಭಕ್ತಹಿತ ।
ಹೃದಯ ಕಮಲ ತ್ರಿಜಗ ವ್ಯಾಪಿತ
ಗುರು ಸದಯ ರೂಪಕ ॥ ೫ ॥
ಸೃಷ್ಟಿ ತಾತನೆ ನೀ ನಿಜಸಖ ಇಷ್ಟ ಬಂಧು ಜನ ।
ದುಷ್ಟ ಕರ್ಮಕೆ ದಿಟ್ಟ ವೈರಿನೀ।
ತುಷ್ಟ ಪುಷ್ಟಿಯ ಬಾಲೆಗಿತ್ತು ಪೊರೆವನೆ ॥ ೬॥
ವರದೆ ಮಡಿಲಲಿ ಸಿರಿಯಲಿ ನಿನ್ನ ವಸತಿ
ಹರುಷದಿ ಶರಣ ವತ್ಸಲ ।
ಎರಗಿ ಪಾಡುವೆ ರಾಗ ಭೈರವಿ ಏಕತಳ ಮಾಧುರಿ॥೭॥
ತ್ಯಾಗ ವೈಭವ ಗುರುಮುನೀ ಸುತ ಯೋಗ ಸೌರಭ ।
ನಾಗ ಶಾಪವ ನೀಗಲೋಸುಗ ಬೇಗ ಬಂದ
ಶ್ರೀ ರಾಜ ಕಮಲಜಾ ॥ ೮ ॥
0 ಕಾಮೆಂಟ್‌ಗಳು