ಭಕ್ತಿ ವೈರಾಗ್ಯ ಪ್ರಕರಣ - ಮಾಡಬಾರದೂ ಮುಂದೇ ಕೇಡುತನಿಗದು Madabaradu munde Kedu Tanigidu

|| ಭಕ್ತಿ ವೈರಾಗ್ಯ ಪ್ರಕರಣ ||



ಮಾಡಬಾರದೂ। ಮುಂದೇ ಕೇಡುತನಿಗದು |

ಬೇಡಿ ಫಲವ ಢಂಬದಿಂದ ಕೂಡಿ

ಕಾಮ್ಯ ಪೂಜೆಗಳನೂ  ||ಪಲ್ಲವಿ॥ 


ಸುತನೊಳಿರುವ ಹಿತವ ಪ್ರಮಥ |

ಪತಿಯೊಳಿಟ್ಟು ತನ್ನ ದೇಹ।

ಮತಿಯ ಧನವ ಕೊಡದೆ ಶಿವಗೆ!

ಸುತರ ಹಿತವ ಬಯಸಿ ನುತಿಯ || ೧ ||


ಸಿರಿಯ ಹರುಷವಿರಲು ತನಗೆ |

ಮರೆತು ಹರನ ಚರಣಗಳನು।

ಮರಣ ಭೀತಿ ಬರಲು ಹರನೇ।

ಪೊರೆಯೋ ಎಂಬ ಕಾಮ್ಯ ಜಪವಾ || ೨ ||


ಪರಮ ಸದ್ಗುರು | ಶಂಕರಾರ್ಯನ।

ಚರಣ ಕೃಪಿಗೆ ದೂರನಾಗಿ |

ಧರೆಯ ಭೋಗಕಾಗಿ ಬರಿದೆ |

ಸಿರಿಯ ಬಯಸಿ ಕ್ರೂರ ತಪವಾ || ಮಾಡ।|


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು