ಗಣಪತಿ ಸ್ತುತಿ - ಗಣಪತೇ ಎನ್ನ ಪಾಲಿಸೋ ಗಂಭೀರಾ, Ganapathe Enna Paliso Gambhira

|| ಗಣಪತಿ ಸ್ತುತಿ ||


ರಾಗ: ಹಂಸಧ್ವನಿ
ತಾಳ: ಆದಿತಾಳ

ರಚನೆ : ಶ್ರೀವೆಂಕಟ ವಿಠಲ ದಾಸರು (ಕ್ರಿ.ಶ.1770-1865)




ಗಣಪತೇ ಎನ್ನ ಪಾಲಿಸೋ ಗಂಭೀರಾ ||ಪ||


ಪಾರ್ವತಿ ನಂದನ ಸುಂದರವದನಾ

ಶರ್ವಾದಿ ಸುರವಂದ್ಯ ಶಿರಬಾಗುವೆನು |||೧||


ಆದಿಪೂಜಿತ ನೀನು ಮೋದ ಭಕುತರಿಗಿತ್ತು

ಮಾಧವನಲಿ ಮನ ಸದಾ ನಿಲಿಸು ನೀ ||೨ ||


ಪಂಕಜ ನಯನ ಶ್ರೀವೆಂಕಟ ವಿಠಲನ

ಕಿಂಕರನೆನಿಸೆನ್ನ ಶಂಕರ ತನಯನೆ || ೩ ||








ರಚನೆ: ಶ್ರೀ ವೆಂಕಟವಿಠಲ ದಾಸರು [ಕ್ರಿಶ. 1770-1865]

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು