ಗಣಪತಿ ಸ್ತುತಿ - ಜಯ ಜಯ ಮೂಷಕಗಮನಾ, Jaya Jaya Mushaka Gamana

|| ಗಣಪತಿ ಸ್ತುತಿ|| 

 ರಚನೆ : ಶ್ರೀ ವಿಜಯದಾಸರು 

 ರಾಗ : ಮಲಹರಿ

ತಾಳ :ರೂಪಕತಾಳ




ಜಯ ಜಯ ಮೂಷಕಗಮನಾ |

ಜಯಜಯ ಗಜಾನನಾ ||

ಜಯಜಯ ನಾಗಾಭರಣ |

ಜಯಏಕದಂತ ಜಯಜಯ

-ಜಯ ಜಯ ಜಯ ಜಯ ||ಪ||


ಮತಿ ಕೊಡು ಪಾರ್ವತಿಯ

ನಿಜತನುಜನೆ ನಾನು ಬಿಡದೆ

ನಿನ್ನನು ನುತಿಸುವೆ ಕ್ಷಿತಿಯೊಳಗೆ |

ಶ್ರೀಲಕುಮಿ - ಪತಿಯ ಕೊಂಡಾಡಿ ಸದ್ಗತಿಯ

ಪಡೆಯುವುದಕ್ಕೆ ಸಾರಥಿಯಾಗು ದೇವಾ

-ಜಯ ಜಯ ಜಯ ಜಯ ||೧||


ಆಕಾಶದಭಿಮಾನಿ ಅಂಗಜನ ಚಾಪ

ನಿರಾಕರಿಸಿ ಬಿಸುಟ, ಲಂಬೋದರನೆ

ಏಕ ಪಿಂಗಳಾದಿಗಳ ಪಿರಿಯ ಹಸ್ತಚತುಷ್ಟ

ಲೋಕದೊಳು ಭಜಿಸುವವರ ವಿದ್ಯಾದಾ ನಿಧಿಯೇ 

ಜಯ ಜಯ ಜಯ ಜಯ ||೨||


ಸೀತಾರಮಣನಿಂದ ಪೂಜಿತನಾಗಿ

ವರನದಿತೀರದಲ್ಲಿ ಮೆರೆವ ಗಣೇಶಾ |

ಸೇತುಮಾಧವ ವಿಜಯ ವಿಠಲರಾಯನ

ದೂತನು ನೀನೆ ಪಾಶಾಂಕುಶಧರನೆ

ಜಯ ಜಯ ಜಯ ಜಯ ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು