ತುಳಸಿ ದೇವಿಯ ಪದಕೆ ನಾರ್ಯಾರು Tulasi Deviya Padake

|| ತುಳಸಿ ಹಾಡು ||

ರಾಗ : ಸುರುಟಿ

ತಾಳ : ಆದಿ




ತುಳಸಿ ದೇವಿಯ ಪದಕೆ ನಾರ್ಯಾರು

 ಬೆಳಗಿರಿ ಆರತಿಯ ||ಪ||

 ಬೆಳಗುವುದು ನಮ್ಮ ಅಳಗಿರಿಯ ರಂಗನ

 ಲಲನೆ ಶ್ರೀತುಳಸಿಗೆ ಕಲಿಮಲ ಹಾರಿಗೆ ||ಅ.ಪ.||


 ದಳ ಪ್ರತಿ ದಳದಲ್ಲಿ ಶ್ರೀಹರಿ ನೆಲೆಸಿಹ ತಾನಲ್ಲಿ

 ಒಲುಮೆಲಿ ಭಕುತರ ಹಲವು ಸೇವೆಗಳು

 ಒಲಿದು ಅಭಿಷ್ಟವ ಸಲಿಸುವ ದೇವಿಗೆ ||೧||


 ಶರಧಿ ಮತಿಸೆ ಅಮೃತ ಕಲಶವ ಧರಿಸುತ ಧನ್ವಂತ್ರಿ

 ಬರಲು ನಯನದಿಂ ದುರುಳೆ ಆನಂದಕೆ

 ವರ ಬಿಂದೋದ್ಭವೆ ಹರಿಪ್ರಿಯಾ ತುಳಸಿಗೆ  ||೨||


 ಜಾಂಬವತಿಯು ದೇವಿ  ನಿನ್ನಲಿ ಇಂಬು ತೋರಿ ಇರಲು

 ಅಂಬುಜಾಕ್ಷ ಗುರುಗೋವಿಂದ ವಿಠಲನ

 ತುಂಬಿದ್ವೈಭವದಿ ಸಂಭ್ರಮ ಸೇವಿಪ ||೩||





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು