ಬೃಂದಾವನಿ ಜನನಿ ವಂದಿಸುವೆ ಸತತ - Brindavan Janani Vandisuve Satata

 || ಶ್ರೀ ತುಲಸೀ ಸ್ತುತಿ ||



ಬೃಂದಾವನಿ ಜನನಿ ವಂದಿಸುವೆ ಸತತ

ಲಂಧರನ ರಾಣಿ ಕಲ್ಯಾಣಿ |

ಕಲ್ಯಾಣಿ ತುಳಸಿನಿಜ ಮಂದಿರೆ ಎನಗೆ ದಯವಾಗೆ ||೧||


ಜಲಜಾಕ್ಷನ ಮಲಕಜ್ಜಲ ಬಿಂದು

ಪೀಯೂಷ ಕಲಶದಲಿ ಬೀಳೆ ಜನಿಸಿದಿ |

ಜನಿಸಿ ಹರಿಯಿಂದ ಶ್ರೀತುಲಸಿ ನೀನೆಂದು ಕರೆಸಿದಿ ||೨||


ತರುಣಿವಲ್ಲಭನ ಪ್ರೀತಿವಿಷಯಳೆ ನಿನ್ನ

ನಾ ತುತಿಸಿ ಕೈಯ ಮುಗಿವೆನು |

ಮುಗಿವೆ ಎನ್ನಯ ಮಹಾ ಪಾತಕವ

ಕಳೆದು ಪೊರೆಯಮ್ಮ ||೩||


ತುಲಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ

ಕಲುಷಕರ್ಮಗಳ ಎಣಿಸದೆ |

ಎಣಿಸದೆ ಸಂಸಾರ ಜಲಧಿಯಿಂದೆಮ್ಮ ಕಡೆಹಾಯ್ದು ||೪||


ನೋಡಿದವ ದುರಿತ ಈಡ್ಯಾಡಿದವ ನಿನ್ನ

ಕೊಂಡಾಡಿದವ ನಿತ್ಯ ಹರಿಪಾದ |

ಹರಿಪಾದಕಮಲಗಳ ಕೂಡಿದವ ಸತ್ಯ ಎಂದೆಂದು ||೫||


ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ

ವಂದಿಸಿದ ಜನರು ಸುರರಿಂದ |

ಸುರರಿಂದ ನರರಿಂದ ವಂದ್ಯರಾಗುವರು ಜಗದೊಳು ||೬||


ಓ ಕಲುಷವರ್ಜಿತೆ ನಿನ್ನ ದಳಗಳಿಂದಲಿ

ಲಕ್ಷ್ಮಿ ನಿಲಯನಂತ್ರಿಗಳ ಪೂಜಿಪ |

ಪೂಜಿಪರಿಗೆ ಪರಮಮಂಗಲದ

ಪದವಿತ್ತು ಸಲಹುವಿ ||೭||


ಶ್ರೀತುಳಸಿದೇವಿ ಮನ್ಮಾತ ಲಾಲಿಸು

ಜಗಸ್ನಾಥವಿಠಲನ ಚರಣಾಬ್ಬ

ಚರಣಾಬ್ಬ ಎನ್ನ ಹೃತ್ಪದ್ಮದಲಿ

ನೀ ತೋರೆ ಕೃಪೆಯಿಂದ ||೮||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು