ಅಂಬಾತನಯ ಹೇರಂಬ - Amba Tanaya Herambha

|| ಗಣಪತಿ ಸ್ತುತಿ ||

ರಾಗ : ಹಂಸಧ್ವನಿ

ತಾಳ : ಆದಿತಾಳ




ಅಂಬಾತನಯ ಅಂಬಾತನಯ ಹೇರಂಬ ಪೂರ್ಣ

ಕರುಣಾಂಬುಧೆ ತವಚರಣಾಂಬುಜಕೆರಗುವೆ ||ಪ||


ದಶನ ಮೋದಕ ಪಾಶಾಂಕುಶಪಾಣೇ |

ಅಸಮ ಚಾರುದೇಷ್ಠ ವಂದಿಪೆ ನಿನಗೆ ||೧||


ವೃಂದಾರಕವೃಂದವಂದಿತ ಚರಣಾರ

ವಿಂದಯುಗಳ ದಯದಿಂದ ನೋಡು ಎನ್ನ||೨||


ಯೂಥಪ ವದನ ಪ್ರದ್ಯೋತ ಸನ್ನಿಭ ಜಗ |

ನ್ನಾಥವಿಠಲನ ಪ್ರೀತಿ ವಿಷಯ, ಜಗ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು