ಪಾರ್ವತಿ ಪಾಲಿಸೆನ್ನ ಮಾನಿನಿರನ್ನೆ - Parvati Palisenna Manini Ranne

|| ಪಾರ್ವತಿ ಸ್ತುತಿ ||

ರಾಗ : ತಿಲಕಕಾಂಬೋಧಿ

ತಾಳ : ಆದಿತಾಳ




ಪಾರ್ವತಿ ಪಾಲಿಸೆನ್ನ | ಮಾನಿನಿರನ್ನೆ ||ಪ||

ಪಾರ್ವತಿ ಭಕುತರ ಸಾರಥಿ ವಂದಿಪೆ

ಸುರಸಾರಥಿ ಷಣ್ಮುಖ ಗಣಪರ ಮಾತೆ||ಅ.ಪ||


ಮನಕಭಿಮಾನಿಯೆ ನೆನೆವೆನು ನಿನ್ನನು

ಅನುಗ್ರಹಿಸೆನಗೆ ಅಂಬುಜಪಾಣಿ ||೧||


ಮಂಗಳೇ ಮೃಡನಂತರಂಗಳೆ ಹರಿಪದ |

ಭೃಂಗಳೆ ತುಂಗಳೆ ಪನ್ನಂಗವೇಣಿ ||೨||


ಗುಣಪೂರ್ಣ ವೇಣುಗೋಪಾಲ ವಿಠಲನ |

ಕಾಣಿಸಿಕೊಡುವಂಥ ತ್ರಿಶೂಲಿಯ ರಾಣಿ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು