|| ಪಾರ್ವತಿ ದೇವಿ ಸ್ತುತಿ ||
ರಾಗ : ಕಾನಡಾ
ತಾಳ : ಆದಿತಾಳ
ಪಾಲಿಸೆ ಶರ್ವಾಣಿ ಪನ್ನಗವೇಣಿ ||ಪ||
ಬಾಲನ ಮಾತನು ಲಾಲಿಸಿ ಬೇಗನೆ |
ಕಾಲಕಾಲಕೆ ಹರಿಧ್ಯಾನ ಮಾಡಿಸೆ ||೧||
ಸುಂದರವದನೆ ಮಂದಿಯ ರೋಗವ
ಕುಂದದೆ ಕಳೆದು ಆನಂದ ಕೊಡೆ ತಾಯಿ ||೨||
ನಾಗಶಯನ ವೈದ್ಯೇಶನ ರಾಣಿ |
ಜಾಗು ಮಾಡದೆ ಪೊರೆಯೆ ಭವಾನಿ ||೩||
ನಿನ್ನ ಸಮಾನದಾತೆ ಕಾಣೆನಲ್ಲೂ ಮಾತೆ |
ಅನ್ಯರ ಬೇಡದ ಉನ್ನತ ಮನನೀಡೆ ||೪||
ದೋಷರಹಿತ ಮಾತೆ ಶ್ರೀಶ ವಿಠಲ ತಾ |
ಪೋಷಿಪ ನಿನ್ನಯ ಭಾಷೆ ಲಾಲಿಸಿಬೇಗ ||೫||
0 ಕಾಮೆಂಟ್‌ಗಳು