|| ಹರಿ ಸ್ತುತಿ ||
ಬೇಟೆಗೆ ಹೊರಟ ವೆಂಕಟರಮಣನಂತೆ
ಉಡುಪಿ ಶ್ರೀಕೃಷ್ಣನ ಇಂದಿನ
ರೂಪ ನೋಡಲು ಬಲು ಅಂದ
ಕರತಾರೆ ಕರತಾರೆ ಶ್ರೀನಿವಾಸನ ಸುರರರಸ
ಸ್ವಾಮಿ ಶ್ರೀ ವೆಂಕಟೇಶನ||ಪ ||
ಬರಹೇಳೆ ಬರಹೇಳೆ ಬೇಗ ಕರಿಗಮನೆ
ರಂಗಗೆ ಸಿರಿರಾಣಿರಮಣ ಘನಾಂಗಗೆ
ಅರಘಳಿಗೆ ಸರಸವಲ್ಲ ಅರಸನಿಲ್ಲದವಳೆ
ಸಲ್ಲಸ್ಮರನೆಂಬೊ ಸಿರಿಕಳ್ಳ ಕರುಣ್ಯಿಲ್ಲ ||೧||
ಸುಂದರ ಸುಂದರ ಶುಭಮಂದಿರನ್ನ
ದಯಾರಸ ಸುಂದರನ್ನ ವರಕಂಬುಕಂದರನ್ನ
ಚೆಂದಾವರೆಗಣ್ಣವನ ಸಿಂಧೂರವರದನ್ನ
ದೇವೇಂದ್ರಜಿತ ಪಾರಿಜಾತ ತಂದನ್ನ||೨||
ಹೋಯಿತೆ ಹೋಯಿತೆ ಹೊನ್ನಪ್ರಾಯ ಯದುರಾಯ
ಬಾರದಾಯಿತೀ ಅವಸ್ಥೆಹುಟ್ಟು
ಹೊಂದಿಕಾಯಬೇಕೆಂದೊಮ್ಮೆಗೆ
ಉದಯವಾದ ಪ್ರಸನ್ನವೆಂಕಕಟರಾಯ
ಬಂದ ಫಲಿಸಿತಾನಂದ ||೩||
0 ಕಾಮೆಂಟ್‌ಗಳು