ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣ - Drishti Ninna Paadadalli Nedo Hange Krishna

|| ಕೃಷ್ಣ ಭಜನೆ ||

 ರಚನೆ : ಪುರಂದರದಾಸರು




ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣ

ದುಷ್ಟಜನ ಸಂಗವನ್ನು ಬಿಡೋ ಹಾಂಗೆ || ಪ ||


ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆ

ಮನ ಕಟ್ಟಿಸಯ್ಯಾ ನಿನ್ನ ಪಾದ ಬಿಡದ್ಹಾಂಗೆ || ಅ.ಪ. ||


ದಿಟ್ಟನಾಗಿ ಕೈಯನ್ನೆತ್ತಿ ಕೊಡೋ ಹಾಂಗೆ

ಕೃಷ್ಣ ನಿನ್ನ ಪೂಜೆಯನ್ನು ನಾ ಮಾಡೋ ಹಾಂಗೆ

ಭ್ರಷ್ಟನಾಗಿ ನಾಲ್ವರೊಳು ತಿರುಗದ್ಹಾಂಗೆ

ಶಿಷ್ಟಜನ ಸೇವೆಯನ್ನು ಮಾಡೋ ಹಾಂಗೆ || 1 ||


ಹುಟ್ಟಿಸಿದ ತಾಯಿ ತಂದೆಯಲ್ಲೋ ನೀನು

ಹೊಟ್ಟೆಗಾಗಿ ದೈನ್ಯ ಪಡಲಾರೆ ನಾನು

ಪಟ್ಟೆ ಪಟ್ಟಾವಳಿ ಬೇಡಲಿಲ್ಲ ನಾನು

ಗುಟ್ಟು ಅಭಿಮಾನಗಳ ಕಾಯೋ ನೀನು || 2 ||


ನಟ್ಟ ನಡು ನೀರೊಳಗೆ ಈಸಲಾರೆ ನಾನು

ಕಟ್ಟೆ ಸೇರಿಸಬೇಕಯ್ಯಾ ನೀನು

ಬೆಟ್ಟದಂಥ ಪಾಪಗಳ ಹೊತ್ತಿರುವೆ ನಾನು

ಸುಟ್ಟುಬಿಡು ಪುರಂದರ ವಿಠ್ಠಲ ನೀನು || 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು