ದೇವಿ ನೀ ಪಾಲಿಸಮ್ಮ ಪ್ರಸಾದವ - Devi Nee Palisamma Prasadava

|| ದೇವಿ ಸ್ತುತಿ ||




ದೇವಿ ನೀ ಪಾಲಿಸಮ್ಮ| ಪ್ರಸಾದವ 

ದೇವಿ ನೀ ಪಾಲಿಸಮ್ಮ ||ಪ||

ದೇವಿ ಪಾಲಿಸು ತವ | ಸೇವಕನಪರಾಧ

ಸಾವಿರವಿದ್ದರು ಭಾವಿಸಿಕೊಳದೀಗ ||ದೇವಿ||


ನುಡಿವಂತ ಬಿನ್ನಪವ | ಲಾಲಿಸಿ ನೀನು

ಕೊಡುಯೆಮಗಿಷ್ಟಾರ್ಥವ |

ಕಡು ದೃಢದಿಂದಲಿ ಬಿಡದೆ ನಂಬಿದೆ ನಿನ್ನ

ಜಡೆಯೊಳಗಿರಿಸಿಹ ಮುಡಿವಾಳದೆಸಳನ್ನು||ದೇವಿ||


ಖ್ಯಾತಿಯೊಳ್‌ ಮೆರೆದವಳೇ | ದಾನವರ ನೀ -

ಪಾತಗೆಯ್ದಿಹ ಚಪಲೆ |

ಭೂತಳದೊಳು  ಜಗನ್ಮಾತೆಯೆಂದೆನಿಸುತ

ನೂತನದೊಳಗಿಟ್ಟ ಕೇತಕಿ ಸುವವನ್ನು ||ದೇವಿ।| 


ರಾಜರಾಜೇಶ್ವರಿಯೇ | ರಾಜೇಶ್ವರಿ

ರಾಜಶೇಖರನ ಪ್ರಿಯೇ |

ರಾಜವದನೆ ಮಹಾ ಪೂಜೆ ಕಾಲದಿ ನಿನ್ನ

ರಾಜಿಪ ಮುಡಿಗಿಟ್ಟ ಜಾಜಿ ಮಲ್ಲಿಗೆ ಹೂವ ||ದೇವಿ।|


ಪುಳಿನ ಪುರದಿ ವಾಸಿಸಿ | ಪುಣ್ಯಾತ್ಮರ

ಕುಲದೇವಿಯೆಂದೆನಿಸಿ |

ಒಲವು ದೋರುತಲುರೆ ಚೆಲುವ ಭಕುತರ ಮನ |

ಕೊಲಿದು ಇಷ್ಟಾರ್ಥವ ಸಲಿಸುವ ಮಹಾದೇವಿ ||ದೇವಿ।|






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು