|| ಸರಸ್ವತಿ ಸ್ತುತಿ ||
ವಾಣಿಯಾ|ಪರಮ ಕಲ್ಯಾಣಿಯಾ|ನೀಲವೇಣಿಯಾ
ಜಾಣೆ ಹಿರಣ್ಯಗರ್ಭನ|ಪ್ರೇಮದ ಮಹಾರಾಣಿಯಾ||ಪ||
ಮಂದಹಾಸ | ಪ್ರವೀಣೆಯಾ
ಮಂದಗಮನೆ|ಬ್ರಹ್ಮಾಣಿಯಾ ||
ಕುಂದರದನೆ|ಸುಭಾಷಿಣಿಯಾ
ಚಂದಿರವದನೆ ।ಪುಷ್ಪ ವೇಣಿಯಾ ||೧||
ಅಜನ ಸುಂದರಿಯ|ತ್ರಿಜಗ ವಂದಿತೆಯಾ
ಭುಜಗ ಭೂಷಣ ಮಾತೆ|ಶಾರದೆಯಾ||
ಸುಜನರ ಸಲಹುವ|ಶ್ರೀ ಸರಸ್ವತಿಯಾ
ಭಜಕವೃಂದದ ಮೂಲ|ವಾಗ್ದೇವಿಯಾ||೨||
ಸರಸೀರುಹಾಂಬಕಿಯಾ|ಕಾಲಾಹಿ ವೇಣಿಯಾ
ಸರಸಿಜಭವನ ರಾಣಿಯಾ|ಪುಸ್ತಕ ಪಾಣಿಯಾ||
ಕರಿವರದ ಶ್ರೀ|ಗುರುಪ್ರಿಯ ವಿಠಲನ
ನಿರುತ ಸ್ಮರಿಸುವ ಶ್ರೀ|ಹೇಮಗರ್ಭನ ಸತಿಯಾ||೩||
0 ಕಾಮೆಂಟ್‌ಗಳು