ಮಡಿಲಾ ತುಂಬುವೆ ಶ್ರೀ ಗೌರಿ ದೇವಿಗೆ - Madila Thumbuve Sri Gauri Devige

||ಗೌರಿ ಮಡಿಲಕ್ಕಿ ಹಾಡು ||




ಮಡಿಲಾ ತುಂಬುವೆ ಶ್ರೀ ಗೌರಿ ದೇವಿಗೆ

ಪರಿಮಳದ ಮಲ್ಲಿಗೆಯ ಮುಡಿಸುವೆ ನಿನ್ನ ಮುಡಿಗೆ||ಪ||


ಲಕ್ಷ್ಮಿ ರೂಪದಲ್ಲಿ ಮನೆಗೆ ಬಾರಮ್ಮ

ಅರಿಶಿನ ಕುಂಕುಮವ ಸ್ವೀಕರಿಸಮ್ಮ

ಮುತ್ತೈದೆ ಭಾಗ್ಯ ಸ್ಥಿರವಾಗಿ ಇರುವಂತೆ

ಸೌಭಾಗ್ಯವತಿಯೆಂದು ಹರಸಮ್ಮ ||೧||


ರೇಷ್ಮೆಯ ಕುಪ್ಪಸವ ನಿನಗೆ ತೊಡಿಸುವೆ

ಅಕ್ಕಿ ಕೊಬ್ಬರಿ ಬೆಲ್ಲ ಮಡಿಲಲ್ಲಿ ಇಡುವೆ

ಭಕ್ತಿಯಿಂದಲಿ ನಾ ಸೆರಗೊಡ್ಡಿ ಬೇಡುವೆ

ಸೌಭಾಗ್ಯವತಿಯೆಂದು ಹರಸಮ್ಮ ||೨||


ಭಾದ್ರಪದ ಮಾಸದಲಿ ತದಿಗೆಯ ದಿನದಂದು

ಸಿರಿ ಸಂಪದಗಳನು ಹೊತ್ತು ನೀ ತರುವೆ

ಸುತನನ್ನು ಕರೆಸಿ ಎಲ್ಲರನು ಹರಸಿ

ಸೌಭಾಗ್ಯವತಿಯೆಂದು ಹರಸಮ್ಮ ||೩||


ನಾನಾ ಫಲ ಪುಷ್ಪಗಳ ನೀಡುವೆನಮ್ಮ

ಭಕ್ತಿಯ ಉಡುಗೊರೆಯ ನಿನಗೀವೆನಮ್ಮ

ರತ್ನ ಮಾಲೆ ಧರಿಸಿ ಮನದಲ್ಲಿ ನೆಲೆಸಿ

ಸೌಭಾಗ್ಯವತಿ ಎಂದು ಹರಸಮ್ಮ ||೪||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು