ದೇವಿ ಸರಸ್ವತಿ ಜಗನ್ಮಾತೆ - Devi Saraswathi Jaganmaathe

|| ಸರಸ್ವತಿ ಸ್ತುತಿ ||




ದೇವಿ ಸರಸ್ವತಿ ಜಗನ್ಮಾತೆ

ವೀದ್ಯೆಯನು ಪಾಲಿಸಿ ದಯೆ ತೋರುಮಾತೆ||ಪ||

 

ವೀಣಾ ಪಾಣಿ ಶೃಂಗಾರವಾಣಿ

ಕೋಮಲ ನಯನೆ ಸರಸಿಜ ವದನೆ

ಹಂಸ ಗಮನೆ ಮಂಜುಳ ಭಾಷಿಣಿ

ಬುದ್ಧಿಪ್ರದಾತೆ ನೀರ ಜಾಕ್ಷಿಯೆ||೧||


ಕಮಲಜೋದ್ಭವೆ ಸಾರಸಾಕ್ಷಿಯೇ

ವಾಗ್ದೇವಿಯೆ ನೀ ಶಾರದೆ

ಎಮ್ಮ ದುರಿತಗಳ ಪರಿಹರಿಸಿ

ನೀ ಮುಕ್ತಿಯ ಪಾಲಿಸಮ್ಮ ತಾಯೆ ನೀ ||೨||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು