ನಿನ್ನ ನಾಮವಿದ್ದರೆ ಸಾಕೊ - Ninna Naamaviddare Saako

|| ಶ್ರೀರಾಮ ಭಜನೆ ||

ರಾಗ - ಪಂತುವರಾಳಿ 
ತಾಳ : ಅಟ್ಟ ತಾಳ



ನಿನ್ನ ನಾಮವಿದ್ದರೆ ಸಾಕೊ ||ಪ||

ಮುನಿದರೆ ಮುನಿ ನಿನ್ನಾಣೆ ಶ್ರೀರಾಮ||ಅ.ಪ||


ಹೊದ್ದಿದ ಪಾಪವನೆಲ್ಲ | ಛಿನ್ನ

ಛಿದ್ರವ ಮಾಡಿ ಖಂಡಿಸಿ ಬಿಡುವ

ಎದ್ದರೆ ಸಂಗಡ ಬರುವ | ಎನ್ನ

ಮುದ್ದಿಸಿ ಮುಂದಕೆ ಮುಕ್ತಿಯ ಕೊಡುವ ||೧||


ಸಾರೆ ಸಂಗಡ ಬರುವ | ಎನ್ನ

ಸೇರಿದ ಪಾಪವ ಕೋಪದಿ ತರಿವ |

ಝಾಡಿಸಿ ಕರ್ಮವ ಕಳೆವ | ಎನ್ನ

ಕೂಡಿಕೊಂಡು ವೈಕುಂಠಕ್ಕೆ ನಡೆವ ||೨||


ಪರಮಾನಂದವವೀವ | ನಿನ್ನ

ಸ್ಮರಣೆಯೆಂಬುದು ಎನ್ನ ಜೀವಕ್ಕೆ ಜೀವ

ವರವ ಕೊಡುವುದೊಂದು ಭಾವ | ಈ

ಪರಿ ಪುಸಿಯಲ್ಲ ಶ್ರೀ ಪುರಂದರವಿಟ್ಠಲ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು