|| ಲಕ್ಷ್ಮಿ ಸ್ತುತಿ ||
ಶುಕ್ರವಾರದಿ ಭಕ್ತಿಲಿ ಭಜಿಸುವೆ
ಲಕ್ಕುಮಿ ದೇವಿಯನು ||ಪ ||
ರುಕ್ಮಾಂಭರನ ವಿಲಕ್ಷಣ ಶೋಭಿಪ
ಲಕ್ಷಣ ಮೂರ್ತಿಯನು |
ರಕ್ಕಸ ರಿಪು ಬಲ ಪಕ್ಕದಿ ಕೂತಿಹ
ರುಕ್ಮಿಣಿ ದೇವಿಯನು ||೧||
ಸಂತತ ಭಜಿಸುವ ಸಂತರ ಹತ್ತಿರ
ನಿಂತು ರಕ್ಷಿಸುತಿಹಳು ||
ಶಾಂತಳು ಸದ್ಗುಣವಂತಳು ಕಮಲಾ
ಕಾಂತನ ಸುಪ್ರಿಯಳು ||೨||
ಆಶ್ಯಾಂಬುಜ ತನು ಹಾಸ ಸುಕುಂತಲ
ಭೂಷಿತ ಬಿಂಭೋಷ್ಟಿ
ಕೂಸಿಗೆ ಕೊಡು ಇಂದಿರೇಶನ ಸಹಜ
ಗಧೀಶಲೆ ತವ ಭೆಟ್ಟಿ ಅಮ್ಮಾ ||೩ ||
0 ಕಾಮೆಂಟ್‌ಗಳು