ಜಯ ಕರುಣಾಘನ ಮೂರ್ತೆ - Jaya Karunaghana Murthe

|| ಹರಿ ಭಜನೆ ||




ಜಯ ಕರುಣಾಘನ ಮೂರ್ತೆ

ಜಯ ಜಗನ್ಮಂಗಲ ಪಾವನ ಕೀರ್ತೇ || 2 ||


ಜಗದೀ ತೋರುವ ಸಕಲವು ನೀನೆ || 2 || 

ಬೆಳಗುವ ಜ್ಯೋತಿಯ ತೇಜವು ನೀನೆ ||

ಭಕ್ತಿಗೆ ಒಲಿಯುವ ದೇವನು ನೀನೆ || 

ಜೀವದೊಳ್ ಜೀವಾತ್ಮ ಜ್ಯೋತಿಯು ನೀನೆ || 

||ಜಯ ಕರುಣಾಘನ ||


ನಂಬಿದವರ ಮನ ಚಂದಿರ ನೀನೆ || 2 ||

ನಂಬದಿಹರ ಲಯ ಕಾರಣ ನೀನೆ ||

ತುಂಬುರಾದಿ ಮುನಿ ವಂದ್ಯನು ನೀನೆ ||

ಹಂಬರಿಪರಿಗಾದಾರನು ನೀನೆ || 

||ಜಯ ಕರುಣಾಘನ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು